ಬೆಂಗಳೂರು : ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಕೆ ಎಸ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇದೀಗ ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೂನ್ 6 ರೊಳಗೆ ರಾಜೀನಾಮೆ ಕೊಡದಿದ್ದರೆ ರಾಜ್ಯವ್ಯಾಪಿ ಆಂದೋಲನ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 6ರ ಒಳಗೆ ರಾಜೀನಾಮೆ ಕೊಡದಿದ್ದರೆ ರಾಜ್ಯ ವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ.ಸಚಿವರ ನಾಗೇಂದ್ರ ರಾಜೀನಾಮೆ ಕೊಡದಿದ್ದರೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ನ ಒತ್ತಡದಿಂದಲೇ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಾಂಗ್ರೆಸ್ನ ಒತ್ತಡ ಮತ್ತು ಬೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಂದ್ರಶೇಖರ್ ಆತ್ಮಹತ್ಯೆಗೆ ಸಿದ್ದರಾಮಯ್ಯನವರೇ ಕಾರಣ ಕಾಂಗ್ರೆಸ್ ಫಸ್ಟ್ ವಿಕೆಟ್ ಬಿದ್ದು ಹೋಯಿತು ಅಂತಾನೆ ಅರ್ಥ ಅಧಿವೇಶನ ನಡೆಯಲು ಬಿಡದಂತಹ ಸ್ಥಿತಿ ಆದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿದ್ದೀಯಪ್ಪ ರಣದೀಪ್ ಸಿಂಗ್ ಸುರ್ಜೆವಾಲಾ? ಸ್ವಲ್ಪ ಬಾಯಿ ಬಿಚ್ಚು. ರಾಹುಲ್ ಗಾಂಧಿಯವರೇ ನೀವು ವಿದೇಶಕ್ಕೆ ಓಡೋಗಿ ಬಿಟ್ಟಿದ್ದೀರಾ? ವಿದೇಶಕ್ಕೆ ಓಡಿ ಹೋಗಿದ್ದರೆ ಅಲ್ಲಿಂದಾದರೂ ನೀವು ಟ್ವೀಟ್ ಮಾಡಿ. ಅದು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರಬೇಕಿದ್ದ 187 ಕೋಟಿ ರೂಪಾಯಿ ಹಣ, ಸುಮ್ಮನಿದ್ದರೆ ನೀವು ಕೂಡ ಪಾತ್ರದಾರರು ಎಂದು ಸ್ಪಷ್ಟವಾಗುತ್ತದೆ ಎಂದು ತಿರುಗೇಟು ನೀಡಿದರು.
ಎಲ್ಲಾ ಐ ಟಿ ಕಂಪನಿಗಳು ಕಾಂಗ್ರೆಸ್ನವರ ಸ್ನೇಹಿತರು, ಸಂಬಂಧಿಗಳದ್ದು, ಈ ಹಿಂದೆ ಇದ್ದ ಸಿಲ್ಕ್ ರೂಟ್ ರೀತಿ ಇದು ಕಾಂಗ್ರೆಸ್ನ ಎಟಿಎಂ ರೂಟ್ ಆಗಿದೆ. ಕಾಂಗ್ರೆಸ್ನವರು ಕಪ್ಪು ಕಾಣಿಕೆ ರೂಟ್ ಮಾಡಿಕೊಂಡಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ಕೇಳಿದರೆ ಅವನು ಎಲ್ಲಾ ಹೇಳಿಬಿಡುತ್ತಾನೆ ಎಂದು ಸಿಎಂ ಸಿದ್ದರಾಮಯ್ಯ ನಾಗೇಂದ್ರನ ರಾಜೀನಾಮೆ ಕೇಳುತ್ತಿಲ್ಲ ಎಂದು ಕಿಡಿ ಕಾರಿದರು.
ಪ್ರಕರಣವನ್ನು ಸಿಬಿಐ ಗೆ ಕೊಟ್ಟು ಮಾನ ಮರ್ಯಾದೆ ಉಳಿಸಿಕೊಳ್ಳಿ ಮೃತ ಅಧಿಕಾರಿಯ ಪೆನ್ ಡ್ರೈವ್ ಲ್ಯಾಪ್ಟಾಪ್ ಕೊಂಡುದಿದ್ದಾರೆ ನಮಗೆ ತೋರಿಸದೆ ಅಧಿಕಾರಿಗಳು ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಾ ಡಿಲೀಟ್ ಮಾಡುತ್ತಾರೆಂದು ಕುಟುಂಬದವರು ಅನುಮಾನ ಪಡುತ್ತಿದ್ದಾರೆ ಮೃತ ಚಂದ್ರಶೇಖರನ್ ಕುಟುಂಬದವರು ಅನುಮಾನ ಪಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು.