ಬೆಂಗಳೂರು : ಕೇಂದ್ರ ಗೃಹ ಸಚಿವರ ಬಗ್ಗೆ ಅಹ ಸಂಸದೀಯ ಪದ ಬಳಕೆ ವಿಚಾರವಾಗಿ ಪ್ರಿಯಾಂಕ ಖರ್ಗೆ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದು, ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಡುವುದನ್ನು ಕಡಿಮೆ ಮಾಡಬೇಕು ಪ್ರಿಯಾಂಕ ಹೆಸರಿನ ಪಕ್ಕದಲ್ಲಿ ಖರ್ಗೆ ಎಂಬುದು ಇಲ್ಲದಿದ್ದರೆ ಮಂಡಲ್ ಪಂಚಾಯತಿ ಸದಸ್ಯ ಕೂಡ ಆಗುತ್ತಿರಲಿಲ್ಲ ಎಂದು ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಎಂಬುದೇ ವಂಶ ಪಾರಂಪರ್ಯದ ಸಂತತಿ. ಕಾಂಗ್ರೆಸ್ ಪಕ್ಷದ ನೀತಿಗಳು ದೇಶವನ್ನು ಹಾಳು ಮಾಡುತ್ತಿವೆ. ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದೆ ಪ್ರಿಯಾಂಕ್ ಪರಾರಿ ಆಗುತ್ತಿದ್ದಾರೆ. ಯಾಕೆಂದರೆ ಪ್ರಿಯಾಂಕ ಖರ್ಗೆ ಅವರ ಸಾಧನೆ ಶೂನ್ಯ. ಬೇರೆಯವರ ಉತ್ತರ ಸಂಧರ್ಭದಲ್ಲಿ ಬಂದು ಟೀಕೆ ಮಾಡುತ್ತಾರೆ ಎಂದು ಕಿಡಿ ಕಾರಿದರು.
ತಂದೆ ಹೆಸರಿನಲ್ಲಿ ಬದುಕುತ್ತಿರುವ ಪ್ರಿಯಾಂಕ ಖರ್ಗೆ ಜನಾನೂರೋಗಿ.ಮಲ್ಲಿಕಾರ್ಜುನ ಖರ್ಗೆ ಅವರೇ ಮಗನಿಗೆ ಬುದ್ಧಿ ಹೇಳಿ ಮಗ ತಂದೆಯ ಹೆಸರು ಹಾಳುಮಾಡುವ ಕೆಲಸ ಮಾಡಬಾರದು.ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಕೂಡ ಇಲ್ಲ ಎಂದು ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.








