ತುಮಕೂರು : ರಾಜ್ಯದಲ್ಲಿ ದಲಿತ ಸಿಎಂ ಕೂಗು ಮುಂದುವರೆದಿದ್ದು ಇದೀಗ ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಅವಕಾಶ ಸಿಕ್ಕರೆ ಮುಂದಿನ ಮುಖ್ಯಮಂತ್ರಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಆಗಲಿ ಎಂದು ಪರಮೇಶ್ವರ್ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪರಮೇಶ್ವರ್ ಆಪ್ತ ಮುರುಳೀಧರ್ ಹಾಲಪ್ಪ ಸ್ವಾಮೀಜಿಗಳ ಶೃಂಗ ಸಭೆ ಆಯೋಜಿಸಿದ್ದು, ಸಿದ್ದರಬೆಟ್ಟದ ಶ್ರೀ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಸ್ವಾಮೀಜಿಗಳು ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ತುಮಕೂರು ಅಭಿವೃದ್ಧಿ ಆಗಬೇಕಾದರೆ ಪರಮೇಶ್ವರ್ ಸಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟಿರುವ ಸ್ವಾಮಿಜಿಗಳು ಪರಂ ಪರ ಬ್ಯಾಟ್ ಬೀಸಿದ್ದಾರೆ.
ಅವಕಾಶ ಸಿಕ್ಕರೆ ಪರಮೇಶ್ವರ್ ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿಯವರೊಂದಿಗೆ ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಕೂಡ ಪರಂ ಸಿಎಂ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೆ ಸ್ವಲ್ಪದರಲ್ಲಿ ಪರಮೇಶ್ವರ್ ಗೆ ಸಿಎಂ ಸ್ಥಾನ ಕೈ ತಪ್ಪಿತ್ತು. ಅದು ಯಾರು ತಪ್ಪಿಸಿದ್ರು ಅನ್ನೋದು ಗೊತ್ತು. ನಾನು ಕೂಡ ದಲಿತ ಸಿಎಂ ಆಗಬೇಕು ಅಂದವನು. ಈಗಲೂ ತುಮಕೂರು ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಪರಮೇಶ್ವರ್ ಸಿಎಂ ಆಗಬೇಕು ಎಂದು ರುದ್ರಮುನಿ ಸ್ವಾಮೀಜಿ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.