ತುಮಕೂರು : ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಹೈದ್ರಾಬಾದ್ ನಡುವೆ ಮೊದಲ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಸ್ಟೇಡಿಯಂ ಸುತ್ತಲು ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕಳೆದ ವರ್ಷ ನಡೆದ ಘಟನೆ ಇನ್ನು ಮಾಸಿಲ್ಲ ಹಾಗಾಗಿ ಎಲ್ಲ ಕಡೆಗೂ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಈ ವಿಚಾರವಾಗಿ ತುಮಕೂರಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ಯುವಕರಿಗೆ ನಿರಾಸೆ ಮಾಡೋದು ಬೇಡವೆಂದು ಅನುಮತಿ ನೀಡಿದ್ದೇವೆ. ಅನುಮತಿ ಕೊಡದಿದ್ರೆ ಬೆಂಗಳೂರು ಹಾಗು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡು ಪಂದ್ಯಕ್ಕೆ ಅನುಮತಿ ಕೊಡಲಾಗಿದೆ. ಕಳೆದ ವರ್ಷ RCB ಕಪ್ ಗೆದ್ದಾಗ ಅಹಿತಕರ ಘಟನೆಯಿಂದ 11 ಜನ ಮೃತಪಟ್ಟಿದ್ದರು. ಆ ಘಟನೆ ಆಗಬಾರದಿತ್ತು. ಅನಿರೀಕ್ಷಿತವಾಗಿ ನಡೆದುಹೋಗಿದೆ.
ಬೆಂಗಳೂರು ಸ್ಟೇಡಿಯಂ ನಲ್ಲಿ ಈ ಹಿಂದೆ ನೂರಾರು ಪಂದ್ಯಗಳು ನಡೆದಿವೆ. ಆಗ ಇಂತಹ ಘಟನೆ ಸಂಭವಿಸಿರಲಿಲ್ಲ. ಬೆಂಗಳೂರಲ್ಲಿ ಕ್ರಿಕೆಟ್ ನಿಲ್ಲಿಸಿದರೆ ರಾಜ್ಯಕ್ಕೆ ಅಪಕೀರ್ತಿ ಬರುತ್ತೆ. ಕ್ಯಾಮರಾ ಹೆಚ್ಚಳ ಆಗಿವೆ. ಸ್ಟೇಡಿಯಂ ಗೇಟ್ ಗಳ ಸಂಖ್ಯೆ ಹೆಚ್ಚಾಗಿದೆ. ಜನರು ತಕ್ಷಣ ಒಳಗೆ ಹಾಗು ಹೊರಗೆ ಹೋಗಲು ಅನುವು ಮಾಡಿದ್ದಾರೆ. ರಸ್ತೆಯಲ್ಲಿ ಟಿಕೆಟ್ ಮಾರಾಟ ಸೇರಿದಂತೆ ಇನ್ನಿತರ ವಿಚಾರಕ್ಕೆ ಕಡಿವಾಣ ಹಾಕಲಾಗಿದೆ. ನನಗೆ ವಿಶ್ವಾಸ ಇದೇ. ಯಾವುದೇ ಆ ರೀತಿ ಅಹಿತಕರ ಘಟನೆ ನಡೆಯಲ್ಲ ಎಂದು ತಿಳಿಸಿದರು.








