ಬೆಳಗಾವಿ : ಭ್ರಷ್ಟಾಚಾರ ಮಾಡಿಲ್ಲ ಅಂದರೆ ಯಾಕೆ ಹೆದರಬೇಕು ಎಂದು ಶಾಸಕ ಸಿಟಿ ರವಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ದಾಳಿ ಕುರಿತು ಇಂದು ಸುವರ್ಣಸೌಧದಲ್ಲಿ ಮಾತನಾಡಿದ ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು. ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆಯೋ ಅಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸುತ್ತದೆ. ತಾವು ತಪ್ಪು ಮಾಡಿಲ್ಲ ಎಂದಾದರೆ ಡಿಕೆಶಿಗ್ಯಾಕೆ ಭಯ ಎಂದರು.
ಈ ಕಾಂಗ್ರೆಸ್ ನವರಿಗೆ ಕುಕ್ಕರ್ ಬಾಂಬ್ ನವರ ಮೇಲೆ ಪ್ರೀತಿ ಎಂದು ವ್ಯಂಗ್ಯವಾಡಿದರು. ಎಲ್ಲವೂ ಸರಿ ಇದ್ದರೆ ಯಾಕೆ ಭಯ ಪಡಬೇಕು, ಏನು ಇಲ್ಲದವರ ಮೇಲೆ ದಾಳಿ ಮಾಡಿದ್ರೆ ಯಾಕೆ ಭಯ ಎಂದು ಸಿಟಿ ರವಿ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
BREAKING NEWS: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ ಬಳಿ 6.4 ತೀವ್ರತೆಯ ಭೂಕಂಪ
ಬೆಳಗಾವಿ ಗಡಿ ವಿಚಾರದಲ್ಲಿ ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ : ಸಿಎಂ ಬೊಮ್ಮಾಯಿ