ಹಾಸನ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಡಿ ಸಂಕಷ್ಟಕ್ಕೆ ಸಿಲುಕಿದ್ದು, ವಿಪಕ್ಷ ನಾಯಕರು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅಗ್ರಹಿಸುತ್ತಿವೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿ, ರಾಜ್ಯದ ಮುಖ್ಯಮಂತ್ರಿ 14 ಸೈಟ್ಗಳನ್ನು ತಗೋಬೇಕಾ? ಸಿಎಂ ಮನಸ್ಸು ಮಾಡಿ ಚಿಟಿಕೆ ಹೊಡೆದರೆ ನೂರಲ್ಲ ಸಾವಿರ ಸೈಟ್ ಬರುತ್ತವೆ ಎಂದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯನ್ನು ಎದುರಿಸಿ ಸಿದ್ದರಾಮಯ್ಯ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ.ಇಂತಹ ಸಂದರ್ಭ ದಲ್ಲಿ ಆಪಾದನೆ ಮಾಡಿ ಸಿದ್ದರಾಮಯ್ಯ ಅವರನ್ನು ಇಡಿಸಿದರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಕುತಂತ್ರ ಮಾಡುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ಅನಿಸುತ್ತಿರುವ ಕುತಂತ್ರ ಮತ್ತು ಷಡ್ಯಂತರವಾಗಿದೆ ಎಂದು ಹಾಸನದಲ್ಲಿ ಗೃಹ ಮಂಡಳಿ ಅಧ್ಯಕ್ಷ ಶಾಸಕ ಶಿವಲಿಂಗೇಗೌಡ ಕಿಡಿ ಕಾರಿದರು.
ದಲಿತರು ಮುಖ್ಯಮಂತ್ರಿ ಆಗಬಾರದು ಎಂಬುದು ನಮ್ಮ ಉದ್ದೇಶ ಅಲ್ಲ.ದಲಿತರು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು. ಆದರೆ ಸಿಎಂ ಸಮರ್ಥವಾಗಿ ಮೋದಿ ಎದುರಿಸಿ ಅಧಿಕಾರ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ 14 ಸೈಟ್ಗಳನ್ನು ತಗೋಬೇಕಾ? ಸಿಎಂ ಮನಸ್ಸು ಮಾಡಿ ಚಿಟಿಕೆ ಹೊಡೆದರೆ ನೂರಲ್ಲ ಸಾವಿರ ಸೈಟ್ ಬರುತ್ತವೆ ಎಂದರು.
ರಾಜಕೀಯ ಜೀವನದಲ್ಲಿ ಒಂದು ದಿವಸವು ಕಪ್ಪು ಚುಕ್ಕೆ ತಗೊಂಡಿಲ್ಲ. ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಅಂತ ಜಿ ಟಿ ದೇವೇಗೌಡ ಕೇಳಿಲ್ವಾ? ಆರೋಪ ಸಾಬೀತಾಗುವವರೆಗೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ. 14 ಸೈಟ್ ಹೊಡೆದಿದ್ದಾರೆ ಸರ್ಕಾರಕ್ಕೆ ನಷ್ಟವಾಗಿದೆ ಅಂತ ತೀರ್ಪು ಬರಲಿ ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದರು.
ಆಗ ಸಿಎಂ ಕುರ್ಚಿ ಖಾಲಿಯಾಗುತ್ತದೆ. ಯಾರನ್ನಾದರೂ ಸಿಎಂ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ 5 ವರ್ಷ ಇರುತ್ತದೆ ಮುಂದೆಯೂ ಅಧಿಕಾರಕ್ಕೆ ಬರುತ್ತದೆ.ಯಾರು ಏನು ಮಾಡಲು ಆಗುವುದಿಲ್ಲ. ಸಣ್ಣಪುಟ್ಟ ಆಪಾದನೆಗಳು ಬರುತ್ತವೆ ನಿವಾರಣೆ ಮಾಡಿಕೊಂಡು ಹೋಗುತ್ತೇವೆ. ಎಂದು ಹಾಸನದಲ್ಲಿ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿಕೆ ನೀಡಿದರು.