ದಾವಣಗೆರೆ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಇಡೀ ದೇಶದಲ್ಲಿ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರೊಬ್ಬರ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದು ಸಿಎಂ ಗೆ ಗಂಡಸ್ತನ ಇದ್ದರೆ ರಾಮನಗರ ಎಂಎಲ್ಸಿ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಎಂಎಲ್ಎ ಅವರಿಂದಾಗಿ ಇಷ್ಟೆಲ್ಲಾ ಆದರೂ ಯಾಕೆ ಕ್ರಮ ಕೈಗೊಂಡಿಲ್ಲ? ಸಿದ್ದರಾಮಯ್ಯನಿಗೆ ಗಂಡಸ್ಥನ ಇದ್ದರೆ, ಮೊದಲು ಆಕ್ಷನ್ ತೆಗೆದುಕೊಳ್ಳಲಿ. ಇಷ್ಟೆಲ್ಲಾ ಆದರೂ ಆಕ್ಷನ್ ತಗೊಳ್ಳೋದಿಲ್ಲ, ಯಾಕ್ ಹೇಳ್ರೀ? ಅವ್ರು ಮುಸ್ಲಿಮರಲ್ವಾ ಅದಕ್ಕೆ ಎಂದರು.
ಪ್ರಕರಣ ತನಿಖೆ ನಡೆಸುವಂತೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೂ, ಕಾಂಗ್ರೆಸ್ ಸರ್ಕಾರ ಮಾತ್ರ ತನಿಖೆಗೆ ವಿಳಂಬ ಮಾಡುತ್ತಿದೆ. ಈ ಬಗ್ಗೆ ಜನರಿಗೆ ಸಿದ್ದರಾಮಯ್ಯ ಸರ್ಕಾರ ಉತ್ತರ ಕೊಡಬೇಕು. ಯಾರ ಜೊತೆಗೆ ನೀವು ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು, ತನಿಖೆಗೆ ವಿಳಂಬ ಮಾಡಿದ್ರಿ ಅಂತಾ ಹೇಳಿ. ತನಿಖೆಗೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದು ಏಕೆಂಬುದು ಮೊದಲು ರಾಜ್ಯದ ಜನರಿಗೆ ಗೊತ್ತಾಗಬೇಕಾಗಿದೆ ಎಂದರು.