ಮಂಡ್ಯ: ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಒಂದು ಮನೆಯನ್ನ ಬಿಜೆಪಿ ಕೊಟ್ಟಿದ್ರೆ ನಾನು ದೇವರಾಣೆ ರಾಜಕೀಯ ನಿವೃತ್ತಿ ತಗೊಳ್ಳುತ್ತೇನೆ. ಬಿಜೆಪಿ ಸಾಬೀತು ಮಾಡಿದ್ರೆ ಸಾಯಂಕಾಲ ರಾಜ್ಯಪಾಲರ ಮನೆಗೆ ಹೋಗಿ ರಾಜಿನಾಮೆ ಕೊಡ್ತೇನೆ ಎಂಬುದಾಗಿ ಸಚಿವ ಜಮೀರ್ ಅಹಮದ್ ಹೇಳುವ ಮೂಲಕ ವಿಜಯೇಂದ್ರ, ಅಶೋಕ್ ಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಶೋಕ್ ತಾಕತ್ ಧಮ್ ಇದ್ಯಾ ನಿಮಗೆ? ಬಿಜೆಪಿಯವರಿಗೆ ಕೆಲಸ ಇಲ್ಲ ಬರಿ ಟಿಕೇ ಮಾಡೋದೆ ಕೆಲಸ. ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದ್ದಾರಾ? ಸಿದ್ದರಾಮಯ್ಯ ಮಾಡಿರುವ ಭಾಗ್ಯದ ಬಗ್ಗೆ ನಾವು ಹೇಳ್ತೇವೆ. ಬಿಜೆಪಿಯವರ ಕಾರ್ಯಕ್ರಮ ಸೋನ್ನೆ ಅವರು ಬರಿ ಹಿಂದು-ಮುಸ್ಲಿಂ ಅಷ್ಟೆ. ಅವರಿಗೆ ಹಿಂದೂ ಮುಸ್ಲಿಂ ಬೇಕಾಗಿಲ್ಲ ಬರಿ ಕುರ್ಚಿ ಬೇಕಷ್ಟೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ಎಲ್ಲಿ? ಗ್ಯಾರಂಟಿ ಗಳ ಬಗ್ಗೆ ಟಿಕೆ ಮಾಡಿದ್ರು ನಮ್ಮ ಸರ್ಕಾರ ಗ್ಯಾರಂಟಿ ಸಕ್ಸಸ್ ಅಗಿದೆ. ಸಿದ್ದರಾಮಯ್ಯ ಹಿಂದೆ ಸ್ಲಂ ಬೋರ್ಟ್ 1.80 ಸಾವಿರ ಮನೆ ಕೊಟ್ಟರು. ರಾಜೀವ್ ಗಾಂಧಿ ಸ್ಕೀಮ್ ನಲ್ಲಿ 800 ಮನೆ ಜಾರಿ. 2.30 ಸಾವಿರ ಮನೆಗಳನ್ನು ಸಿದ್ದರಾಮಯ್ಯ ಜಾರಿ ಮಾಡಿದ್ರು. ಕೇಂದ್ರ ಸರ್ಕಾರ ಬರಿ 1.5 ಲಕ್ಷ ಕೊಡ್ತಾರೆ. ನಾನು ಮಂತ್ರಿಯಾಗಿ ಮನೆಗಳನ್ನು ಕಂಪ್ಲೀಟ್ ಮಾಡಲು 9.5 ಸಾವಿರ ಕೋಟಿ ಬೇಕಾಗುತ್ತೆ. 39,700 ಮನೆಗಳನ್ನ ಕೊಟ್ಟಿದ್ದೇವೆ. ಬಿಜೆಪಿಯವರು ಯಾಕೆ ಕೊಟ್ಟಿಲ್ಲ.? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರನಾ ಬಡವರ ಬಗ್ಗೆ ಕಾಳಜಿ ಇದೆ. ನವೆಂಬರ್ ಮತ್ತೆ ಮನೆಗಳನ್ನು ಬಡವರಿಗೆ ಕೊಡ್ತಿದ್ದೇವೆ. ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಒಂದು ಮನೆಯನ್ನ ಬಿಜೆಪಿ ಕೊಟ್ಟಿದ್ರೆ ನಾನು ದೇವರಾಣೆ ರಾಜಕೀಯ ನಿವೃತ್ತಿ ತಗೊಳ್ಳುತ್ತೇನೆ ಎಂಬುದಾಗಿ ಆರ್.ಅಶೋಕ್ ಗೆ ಚಾಲೆಂಜ್ ಮಾಡ್ತೇನೆ ಸಾಬೀತು ಮಾಡಲಿ. ನಾಳೆನೆ ರಾಜಕೀಯ ನಿವೃತ್ತಿಯಾಗುತ್ತೇನೆ. ಒಂದು ಮನೆ ಕೊಟ್ಟಿರುವ ಸಾಬೀತು ಮಾಡಲಿ. ರಾಜಕೀಯ ನಿವೃತ್ತಿ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಸವಾಲ್ ಎಸೆದಿದ್ದಾರೆ.
ಬೇರೆಯವರ ತರ ಡಂಗೂರ ಹೊಡೆಯಲ್ಲ. ಬಿಜೆಪಿ ಸಾಬೀತು ಮಾಡಿದ್ರೆ ಸಾಯಂಕಾಲ ರಾಜ್ಯಪಾಲರ ಮನೆಗೆ ಹೋಗಿ ರಾಜಿನಾಮೆ ಕೊಡ್ತೇನೆ. ಅಶೋಕ್ ತಾಕತ್ , ಧಮ್ ಬಗ್ಗೆ ಮಾತನಾಡ್ತರೆ. ತಾಕತ್ ಧಮ್ ಇದ್ಯಾ ನಿಮಗೆ? ಎಂದು ಗುಡುಗಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?