ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಿದಿದ್ದರೆ ಇಂಜಿನಿಯರ್ಗಳ ಸಂಬಳ ಕಡಿತ ಮಾಡಲಾಗುವುದು ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ ನೀಡಲಾಗಿದೆ.
ರಸ್ತೆ ಗುಂಡಿಗಳ ಅವಾಂತರ ಸೃಷ್ಟಿಯಾದಗೆಲ್ಲ ಬಿಬಿಎಂಪಿ ಗುಂಡಿ ಮುಚ್ಚುತ್ತೇವೆ ಎಂದು ಉತ್ತರ ನೀಡುತ್ತಾರೆ. ಆದ್ರೆ ಹೊಸ ವರ್ಷಕ್ಕಾದ್ರೂ ಈ ಬಾರಿ ಗುಂಡಿ ಮುಚ್ಚೋದಕ್ಕೆ ಬಿಬಿಎಂಪಿ ಕಮೀಷನರ್ ಹೊಸದೊಂದು ಮಾಸ್ಟರ್ ಪ್ಲ್ಯಾನ್ ಮೂಲಕ ಎಚ್ಚರಿಕೆ ಮಾರ್ಗವನ್ನು ಕೈಗೊಂಡಿದ್ದಾರೆ. ಅರೇ ಅದೇನು ಅಂತಾ ಯೋಚಿಸುತ್ತಿದ್ದಾರೆ ಕೆಳಗಿನ ವರದಿ ಓದಿ ತಿಳಿಯಿರಿ..
ರಸ್ತೆಗುಂಡಿಗಳ ಅವಾಂತರದ ಕುರಿತು ಸುದ್ದಿಗಾರರೊಂದಿಗೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮಾತನಾಡಿ , ರಸ್ತೆ ಗುಂಡಿಗಳ ಸಮಸ್ಯೆ BWSSB, BESCOM ಪ್ರಮುಖ ಕಾರಣವಾಗಿದೆ .ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ನಮ್ಮ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಹಾಗೇನಾದ್ರು ಮಾಡಲಿಲ್ಲ ಅಂದ್ರೆ ನಮ್ಮ ವಾರ್ಡ್ ಹಾಗೂ ಮೇಜರ್ ರೋಡ್ ಇಂಜಿನಿಯರ್ಗಳ ಸಂಬಳವನ್ನು ಕಡಿತ ಮಾಡಿ ರಸ್ತೆ ದುರಸ್ತಿ ಮಾಡ್ತೇವೆ ಎಂದು ಕಮಿಷನರ್ ತುಷಾರ್ ಗಿರಿನಾಥ್ಎಚ್ಚರಿಕೆ ನೀಡಿದ್ದಾರೆ
ಡಿಸೆಂಬರ್ 31ರ ಒಳಗೆ ಎಲ್ಲ ಗುಂಡಿ ಮುಚ್ಚೋದಕ್ಕೆ ಇಂಜಿನಿಯರ್ಗಳ ಆದೇಶ ಹೊರಡಿಸಲಾಗಿದೆ, ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ನಿಮ್ಮ ಸಂಬಳ ಕಡಿತ ಗೊಳಿಸಲಾಗುತ್ತದೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹೊಸ ವರ್ಷಕ್ಕೆ ರಸ್ತೆ ಗುಂಡಿಗಳಿಗೆ ಮುಕ್ತಿ ಸಿಗುತ್ತಾ ಅನ್ನೋದು ಕಾದು ನೋಡಬೇಕಾಗಿದೆ