ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಂಗಳವಾರ (ಅಕ್ಟೋಬರ್ 11) ಹತ್ತು ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಮಾಡಿಸಿದವರು ಮತ್ತು ಅದನನು ಅಂದಿನಿಂದ ಎಂದಿಗೂ ನವೀಕರಿಸದವರಿಗೆ ತಮ್ಮ ದಾಖಲೆಗಳು ಮತ್ತು ಮಾಹಿತಿಯನ್ನು ನವೀಕರಿಸುವಂತೆ ಮನವಿ ಮಾಡಿದೆ. ಯುಐಡಿಎಐ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
“10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಮಾಡಿದ ವ್ಯಕ್ತಿಗಳು ಮತ್ತು ನಂತರದ ವರ್ಷಗಳಲ್ಲಿ ಎಂದಿಗೂ ನವೀಕರಿಸದ ವ್ಯಕ್ತಿಗಳು, ಅಂತಹ ಆಧಾರ್ ಸಂಖ್ಯೆಯನ್ನು ಹೊಂದಿರುವವರು ದಾಖಲೆಗಳನ್ನು ನವೀಕರಿಸಲು ವಿನಂತಿಸಲಾಗಿದೆ” ಎಂದು ಯುಐಡಿಎಐ ಹೇಳಿದೆ. ಈ ಸೌಲಭ್ಯವನ್ನು ಆನ್ ಲೈನ್ ನಲ್ಲಿಯೂ ಪಡೆಯಬಹುದಾಗಿದೆ.
ಈ ಹತ್ತು ವರ್ಷಗಳಲ್ಲಿ, ಆಧಾರ್ ಸಂಖ್ಯೆಯು ವ್ಯಕ್ತಿಯ ಗುರುತಿನ ಪುರಾವೆಯಾಗಿ ಗುರುತಿಸಿಕೊಂಡಿದೆ ಮತ್ತು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ ಎಂದು ಯುಐಡಿಎಐ ಹೇಳಿದೆ. ಈ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು, ಜನರು ಇತ್ತೀಚಿನ ವೈಯಕ್ತಿಕ ವಿವರಗಳೊಂದಿಗೆ ಆಧಾರ್ ಡೇಟಾವನ್ನು ನವೀಕರಿಸಬೇಕು, ಇದರಿಂದ ಆಧಾರ್ ದೃಢೀಕರಣ ಮತ್ತು ಪರಿಶೀಲನೆಯಲ್ಲಿ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ ಎಂದು ಯುಐಡಿಎಐ ಹೇಳಿದೆ.
ಯುಐಡಿಎಐ ಆಧಾರ್ ಕಾಯ್ದೆ, 2016 ರ ಅಡಿಯಲ್ಲಿ ಜುಲೈ 12, 2016 ರಂದು ಭಾರತ ಸರ್ಕಾರವು ಸ್ಥಾಪಿಸಿದ ಶಾಸನಬದ್ಧ ಪ್ರಾಧಿಕಾರವಾಗಿದೆ. ದ್ವಂದ್ವ ಮತ್ತು ನಕಲಿ ಗುರುತುಗಳನ್ನು ತೊಡೆದುಹಾಕಲು ಭಾರತದ ಎಲ್ಲಾ ನಿವಾಸಿಗಳಿಗೆ ‘ಆಧಾರ್’ ಎಂದು ಕರೆಯಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯುಐಡಿ) ನೀಡುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು.