ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ನಟ ದರ್ಶನ್ ಅವರನ್ನು ಭೇಟಿಯಾಗಲು ಕುಟುಂಬಸ್ಥರು, ಸ್ನೇಹಿತರು, ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಸಹ ಅವರನ್ನು ಭೇಟಿಯಾಗಿ ಮಾತನಾಡಿಸಿ ಬಂದಿದ್ದಾರೆ. ಇದೀಗ ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಟ ರಾಜ ಬಿ.ಶೆಟ್ಟಿ ಅವರು ದರ್ಶನ್ ಅವರನ್ನು ಭೇಟಿಯಾಗುವ ಕುರಿತು ಹೇಳಿಕೆ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ದರ್ಶನ್ ಅನ್ನು ನೋಡಲು ಹೋಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ನಾನು ನನ್ನ ವೃತ್ತಿ ಜೀವನದಲ್ಲಿ ದರ್ಶನ್ ಅವರನ್ನು ವೇದಿಕೆಯೊಂದರಲ್ಲಿ ಕೇವಲ ಒಮ್ಮೆ ಮಾತ್ರ ಭೇಟಿ ಆಗಿದ್ದೇನೆ. ಅವರೊಂದಿಗೆ ಅಂಥಹಾ ಪರಿಚಯವೂ ಇಲ್ಲ. ಕೇವಲ ಒಮ್ಮೆ ಭೇಟಿ ಆಗಿರುವ ವ್ಯಕ್ತಿ ಈಗ ಜೈಲಿಗೆ ಹೋಗಿದ್ದಾರೆಂದರೆ ನಾನು ಏಕೆ ನೋಡಲು ಹೋಗಲಿ. ಕೇವಲ ಒಂದು ಬಾರಿ ಮಾತ್ರ ಭೇಟಿಯಾದ ವ್ಯಕ್ತಿ ಜೈಲಿಗೆ ಹೋದರೆ ನಾನು ಹೋಗಿ ಭೇಟಿ ಆಗಬೇಕ? ನಾನು ಯಾಕೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಅವರು ಮಾತನಾಡಿದ್ದು ಆ ರೀತಿ ಘಟನೆ ಆಗಬಾರದು ನಡೆದು ಹೋಗಿದೆ. ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು ಎಂದು ಉಳಿದ ನಟರಿಗೂ ಸಹ ಇದೊಂದು ಮುನ್ನೆಚ್ಚರಿಕೆ ಆಗಿದೆ. ಅದರ ಬಗ್ಗೆ ಹೆಚ್ಚು ಮಾತನಾಡಿ ಪ್ರಯೋಜನವಿಲ್ಲ.
ಪೊಲೀಸರು ಕೂಡ ಈ ಒಂದು ಪ್ರಕರಣದಲ್ಲಿ ಉತ್ತಮವಾಗಿ ಹ್ಯಾಂಡಲ್ ಮಾಡಿ ತನಿಖೆ ಮಾಡಿದ್ದು ಬಹಳ ಚೆನ್ನಾಗಿದೆ.ಶಕ್ತಿಶಾಲಿ, ಪ್ರಭಾವಶಾಲಿ ವ್ಯಕ್ತಿಗಳಿಗೆ ಶಿಕ್ಷೆ ಆಗಲ್ಲ ಎಂಬ ಅಭಿಪ್ರಾಯ ಜನರಲ್ಲಿ ಇದೆ. ಈಗ ದರ್ಶನ್ ಆರೋಪಿ ಸ್ಥಾನದಲ್ಲಿದ್ದಾರೆ. ಅವರು ಅಪರಾಧಿ ಆಗುತ್ತಾರಾ ಇಲ್ಲವಾ ನೋಡೋಣ’ ಎಂದಿದ್ದಾರೆ.