ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರಿಗೆ ದೇಹದ ಅಂಗಗಳಲ್ಲಿ ಮೂಳೆ ಕೂಡ ಅವಶ್ಯಕತೆ. ಈ ಮೂಳೆ ಆರೋಗ್ಯ ಚೆನ್ನಾಗಿದ್ದರೆ ದೇಹದ ಸಂಪೂರ್ಣ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಆದರೆ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಬಾಲ್ಯದಲ್ಲಿ ಮೂಳೆ ಮುರಿತ ಉಂಟಾಗಿದ್ದರೆ ವಯಸ್ಸಾದಾಗ ಕೂಡಾ ಈ ಸಮಸ್ಯೆ ಉಲ್ಪಣವಾಗಿ ಆಸ್ಟಿಯೊಪೊರೋಸಿಸ್ ಎಂಬ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.
ಆಸ್ಟಿಯೊಪೊರೋಸಿಸ್ ಎಂದರೇನು?
ಆಸ್ಟಿಯೊಪೊರೋಸಿಸ್ ಮೂಳೆಗೆ ಸಂಬಂಧಿಸಿದ ರೋಗವಾಗಿದೆ. ಈ ಸಮಸ್ಯೆ ಇದ್ದರೆ ಮೂಳೆ ಮುರಿಯುವ ಹಾಗೂ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಾಲ್ಯದಲ್ಲಿ ಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತೆ ಮೂಳೆಗಳು ಮುರಿದು ಆಸ್ಟಿಯೊಪೊರೋಸಿಸ್ ಬರುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನವೊಂದರಿಂದ ಸಾಬೀತಾಗಿದೆ. ಬಾಲ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮೂಳೆ ಮುರಿದವರಿಗೆ ಪ್ರೌಢಾವಸ್ಥೆಯಲ್ಲಿ ಮೂಳೆ ಮುರಿಯುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಅಧ್ಯಯನದ ಪ್ರಕಾರ ಸುಮಾರು ಕಾಲು ಭಾಗದಷ್ಟು ಪುರುಷರು ಮತ್ತು ಶೇಕಡಾ 15 ರಷ್ಟು ಮಹಿಳೆಯರಿಗೆ ಬಾಲ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮೂಳೆ ಮುರಿದಿದೆ ಎನ್ನಲಾಗಿದೆ. ಅಸಮರ್ಪಕ ಪೋಷಣೆ, ಅತಿಯಾದ ವ್ಯಾಯಾಮ, ಅಧಿಕ ತೂಕ, ಅಧಿಕ ಬಾಡಿ ಮಾಸ್ ಇಂಡೆಕ್ಸ್, ವಿಟಮಿನ್ ಡಿ ಕೊರತೆ, ಕಡಿಮೆ ಕ್ಯಾಲ್ಸಿಯಂ ಸೇವನೆ ಮತ್ತು ದೈಹಿಕ ದುರುಪಯೋಗದಿಂದ ಮಕ್ಕಳಲ್ಲಿ ಮೂಳೆಗಳು ಮುರಿಯುತ್ತವೆ ಎನ್ನುವುದು ಈ ಸಂಶೋಧನೆಯಿಂದ ತಿಳಿದುಬಂದಿದೆ.
ಆದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು, ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಡಿ ಸೇವಿಸಿ, ಪ್ರೊಟೀನ್ ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಿದರೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು, ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಡಿ ಸೇವಿಸಿ, ಪ್ರೊಟೀನ್ ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಿದರೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.