ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ನೀಡುವುದಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಹೇಳಿತ್ತು.
ಇದೀಗ ಪಂಚಮಸಾಲಿಯನ್ನು 2ಎ ಪ್ರವರ್ಗಕ್ಕೇ ಸೇರಿಸುವಂತೆ ಪಂಚಮಸಾಲಿ ಬಿಗಿ ಪಟ್ಟು ಹಿಡಿದಿದೆ. 24 ಗಂಟೆಯೊಳಗೆ 2ಎ ಸೇರ್ಪಡೆ ಘೋಷಣೆ ಮಾಡಿ ಜನವರಿ 12 ರೊಳಗೆ ಸರ್ಕಾರಿ ಆದೇಶ ಬರಬೇಕು. ಇಲ್ಲದಿದ್ದಲ್ಲಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಇವತ್ತು ಸಚಿವ ಮುರುಗೇಶ್ ನಿರಾಣಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ.
ಹೋರಾಟಗಾರರ ಹೊಸ ಗಡುವು ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬುದು ಸದ್ಯಕ್ಕಿರುವ ಕುತೂಹಲವಾಗಿದೆ. ಪಂಚಮಸಾಲಿ ಮೀಸಲಾತಿ’ ಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಭಾರೀ ಪ್ರತಿಭಟನೆ ನಡೆಸಿದ್ದು, ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡುವುದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು, ಆದರೆ ಪಂಚಮಸಾಲಿ ಸಮುದಾಯದವರು 2 ಎ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ.
BIGG NEWS : ‘ಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಾಳಿ’ಯಿದೆ: ಟ್ವೀಟ್ ಮೂಲಕ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ
ಶಿಷ್ಯ ವೇತನದ ಕುರಿತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ |Scholarship