ನವದೆಹಲಿ : ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ನಡುವಿನ ಹೋರಾಟ ಮುಂದುವರಿದಿದೆ. ಸೂರ್ಯಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅದರ ಪ್ರಯೋಜನ ಪಡೆದರು. ಆದ್ರೆ, ಕಳೆದ ಪಂದ್ಯದಲ್ಲಿ, ಅವರು ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮೊದಲ ಸ್ಥಾನವನ್ನ ಕಳೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ, ಅವ್ರು 119 ರನ್ ಗಳಿಸಿದರು ಮತ್ತು ಅತ್ಯಧಿಕ ರನ್ ಸ್ಕೋರರ್ ಆಗಿದ್ದರು. ಅದೇ ಸಮಯದಲ್ಲಿ, ರಿಜ್ವಾನ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 316 ರನ್ ಗಳಿಸಿದರು.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಆರನೇ ಪಂದ್ಯದಲ್ಲಿ ರಿಜ್ವಾನ್ಗೆ ವಿಶ್ರಾಂತಿ ನೀಡಲಾಯಿತು ಮತ್ತು ಕಳೆದ ಪಂದ್ಯದಲ್ಲಿ ಅವ್ರು ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತು. ಈ ಕಾರಣದಿಂದಾಗಿ, ಸೂರ್ಯಕುಮಾರ್ ಕಳೆದ ಟಿ20 ಪಂದ್ಯದಲ್ಲಿ ಅವರನ್ನ ಹಿಂದಿಕ್ಕಿ ಮೊದಲ ಸ್ಥಾನವನ್ನ ಪಡೆಯುವ ಅವಕಾಶವನ್ನು ಪಡೆದರು. ಆದಾಗ್ಯೂ, ಅವ್ರು ಅದನ್ನು ತಪ್ಪಿಸಿಕೊಂಡರು. ಪ್ರಸ್ತುತ, ಇಬ್ಬರು ಆಟಗಾರರ ಶ್ರೇಯಾಂಕದಲ್ಲಿ 16 ರೇಟಿಂಗ್ ಪಾಯಿಂಟ್’ಗಳ ವ್ಯತ್ಯಾಸವಿದೆ. ಈಗ ಇಬ್ಬರೂ ಆಟಗಾರರು ಅಕ್ಟೋಬರ್ 23 ರಂದು ನಡೆಯಲಿರುವ 2022ರ ಟಿ20 ವಿಶ್ವಕಪ್ನಲ್ಲಿ ಆಡಲಿದ್ದಾರೆ ಮತ್ತು ಈ ಪಂದ್ಯದಲ್ಲಿ, ಮೊದಲ ಸ್ಥಾನಕ್ಕಾಗಿ ಇಬ್ಬರ ನಡುವೆ ಹೋರಾಟ ನಡೆಯಲಿದೆ.
ಬಾಬರ್ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.!
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಲೋಕೇಶ್ ರಾಹುಲ್ ಕೂಡ ಏಳು ಸ್ಥಾನಗಳ ಏರಿಕೆ ಕಂಡು 14ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರಾಹುಲ್ 108 ರನ್ ಗಳಿಸುವ ಅನುಕೂಲವನ್ನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಇದೇ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಡಿ ಕಾಕ್ ಎಂಟು ಸ್ಥಾನಗಳ ಏರಿಕೆ ಕಂಡು 12ನೇ ಸ್ಥಾನಕ್ಕೆ ತಲುಪಿದ್ದಾರೆ. ರೈಲಿ ರುಸ್ಸೊ 23 ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ ತಲುಪಿದ್ದಾರೆ. ಡೇವಿಡ್ ಮಿಲ್ಲರ್ 10 ಸ್ಥಾನ ಮೇಲೇರಿ 29ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ನ ಡೇವಿಡ್ ಮಲಾನ್ ಒಂದು ಸ್ಥಾನ ಗಳಿಸಿದ್ದಾರೆ. ಅವ್ರು ಐದನೇ ಕ್ರಮಾಂಕದಲ್ಲಿ ಬಂದಿದ್ದಾರೆ. ಅವರ ಸಹ ಆಟಗಾರ ಬೆನ್ ಡಕೆಟ್ ಎಂಟು ಸ್ಥಾನ ಮೇಲೇರಿ 24ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಹೇಜಲ್ವುಡ್ ಅಗ್ರಸ್ಥಾನ
ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿ ಉಳಿದಿದ್ದಾರೆ. ಇಂಗ್ಲೆಂಡ್ನ ಆದಿಲ್ ರಶೀದ್ ಮತ್ತು ದಕ್ಷಿಣ ಆಫ್ರಿಕಾದ ತಬ್ರೈಜ್ ಸಾಮ್ಸಿ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಎರಡನೇ, ಶ್ರೀಲಂಕಾದ ವನಿಂದು ಹಸರಂಗ ಮೂರನೇ ಮತ್ತು ಆಸ್ಟ್ರೇಲಿಯಾದ ಆಡಮ್ ಜಂಪಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂವರೂ ತಲಾ ಎರಡು ಸ್ಥಾನಗಳನ್ನು ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಏಳು ಸ್ಥಾನಗಳ ಜಿಗಿತ ಕಂಡು 10ನೇ ಸ್ಥಾನಕ್ಕೆ ತಲುಪಿದ್ದಾರೆ. ರವಿಚಂದ್ರನ್ ಅಶ್ವಿನ್ 28 ಸ್ಥಾನಗಳ ಏರಿಕೆ ಕಂಡು 20ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ನ ರೀಸ್ ಟಾಪ್ಲಿ 9 ಸ್ಥಾನ ಮೇಲೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ.