ಕೆಎನ್ಎನ್ಡಿಜಿಟಲ್ ಡೆಸ್ಕ್ : ಸೂರ್ಯಕುಮಾರ್ ಯಾದವ್ ಬುಧವಾರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವದ ನಂ.1 ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಯಾದವ್ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನ ಹಿಂದಿಕ್ಕಿ ಟಿ20ಐ ಅಗ್ರಮಾನ್ಯ ಬ್ಯಾಟ್ಸ್ಮನ್ ಶ್ರೇಯಾಂಕವನ್ನು ಹೊಂದಿರುವ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ವರ್ಷ ಮಾರ್ಚ್ನಲ್ಲಿ ಭಾರತಕ್ಕಾಗಿ ಟಿ20ಐ ಪ್ರಯಾಣವನ್ನ ಪ್ರಾರಂಭಿಸಿದ ನಂತ್ರ, ಯಾದವ್ ತಮ್ಮ ದೇಶಕ್ಕಾಗಿ 37 ಪಂದ್ಯಗಳಿಂದ ಒಂದು ಶತಕ ಮತ್ತು 11 ಅರ್ಧಶತಕಗಳನ್ನ ಗಳಿಸುವ ಮೂಲಕ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿ ತಮ್ಮನ್ನ ತಾವು ಸ್ಥಾಪಿಸಿಕೊಂಡಿದ್ದಾರೆ. 32 ವರ್ಷದ ಯಾದವ್ ಭಾರತದ ಪರ 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಯಾದವ್ 863 ಮತ್ತು ರಿಜ್ವಾನ್ 842 ಅಂಕಗಳನ್ನ ಗಳಿಸಿದ್ದಾರೆ. ನ್ಯೂಜಿಲೆಂಡ್’ನ ಡೆವೊನ್ ಕಾನ್ವೇ 792 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನ ಪೂರ್ಣಗೊಳಿಸಿದ್ದಾರೆ.