ಕೆಎನ್ ಎನ್ ನ್ಯೂಸ್ ಡೆಸ್ಕ್ : ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಬುದ್ಧಿವಂತ ಜೀವಿ ಮಾನವ ಹೊಸ ಹೊಸ ರೀತಿಯ ಆವಿಷ್ಕಾರಗಳನ್ನು ಮಾಡುತ್ತಿರುತ್ತಾನೆ. ಇವುಗಳಿಂದ ಕಷ್ಟದ ಕೆಲಸಗಳನ್ನು ಬಹಳ ಸುಲಭವಾಗಿ ಮಾಡಿ ಮುಗಿಸಬಹುದು.
ಹೌದು, ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ತಮ್ಮ ಕೆಲಸ ಸುಲಭಗೊಳಿಸಿಕೊಳ್ಳಲು ಎತ್ತುಗಳನ್ನು ಬಳಸಿಕೊಂಡಿದ್ದಾರೆ. ಎತ್ತುಗಳಿಗೆ ಟ್ರೆಡ್ಮಿಲ್ ಯಂತ್ರ ನಿರ್ಮಿಸಲಾಗಿದೆ. ಟ್ರೆಡ್ಮಿಲ್ ಮೇಲೆ ಎತ್ತು ನಡೆಯುವುದರಿಂದ ನೀರಾವರಿಗಾಗಿ ಹೊಲಗಳಿಗೆ ನೀರು ಪಂಪ್ ಮಾಡುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು ಕೆಲಸಗಳಿಗೆ ಎತ್ತುಗಳನ್ನು ಇಲ್ಲಿ ಬಳಸಿಕೊಳ್ಳುವುದನ್ನು ನೋಡಬಹುದು.
RURAL INDIA Innovation. It’s Amazing!! pic.twitter.com/rJAaGNpQh5
— Awanish Sharan (@AwanishSharan) September 23, 2022
ಈ ವಿಡಿಯೋವನ್ನು IAS ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗಳು ಇದು ಪ್ರಾಣಿ ಹಿಂಸೆಯನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಅದ್ಭುತವಲ್ಲ. ನನಗೆ ಇದು ಕ್ರೌರ್ಯವೆಂದು ತೋರಿಸುತ್ತಿದೆ ಎನ್ನುತ್ತಿದ್ದಾರೆ. 181 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್ಗೆ ಟೆಂಪೋಗೆ ಡಿಕ್ಕಿ ಹೊಡೆದು ಐವರು ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವು
BIGG NEWS : ದಾವಣಗೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾ ಯಾತ್ರೆಯಲ್ಲಿ `ಗೋಡ್ಸೆ’ ಭಾವಚಿತ್ರ ಪ್ರದರ್ಶನ!