ಬೆಂಗಳೂರು : ಸ್ವಪಕ್ಷದ ವಿರುದ್ಧವೇ ಅಸಮಾಧಾನವನ್ನು ಹೊರಹಾಕಿದ್ದ ಬಿಜೆಪಿ ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ವರಿಷ್ಠರನ್ನು ಭೇಟಿಯಾಗಿ ಬಂದ ನಂತರ ಲೋಕಸಭೆ ಚುನಾವಣೆಗೆ 28 ಕ್ಷೇತ್ರಗಳಲ್ಲಿ ಮೂರೂ ಕ್ಷೇತ್ರ ನನಗೆ ವಹಿಸಿದರೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಕುಡಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ.ಯಾವುದೇ ಮೂರು ಕ್ಷೇತ್ರ ವಹಿಸಿದರು ಗೆಲ್ಲಿಸಿ ಕೊಂಡು ಬರುತ್ತೇನೆ.28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರವಹಿಸಿದರೆ ನಾನು ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ನನಗೆ ನನ್ನ ಶ್ರಮ ಇದೆ ಎಂದು ಮಾಜಿ ಸಚಿವ ವಿ ಸೋಮಣ್ಣ ತಿಳಿಸಿದರು.
ಒಳ್ಳೆಯತನಕ್ಕೆ ಒಳ್ಳೆ ನಡವಳಿಕೆಗೆ ಸಹಾಯ ಆಗುತ್ತದೆ.ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ನಡವಳಿಕೆ ಅವರ ತೀರ್ಮಾನ ಅವರ ಭಾವನೆ ಎಲ್ಲವೂ ಕೂಡ ಸುಖಾಂತ್ಯವಾಗಿದೆ. ಕೆಲಸ ಮಾಡಿ ಬಳಿಕ ಮುಂದಿನದ್ದನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಪುತ್ರನಿಗೆ ಜಿಲ್ಲಾಧ್ಯಕ್ಷನ ಕೈ ತಪ್ಪಿದ ವಿಚಾರ ಮಾಜಿ ಸಚಿವ ವಿ ಸೋಮಣ್ಣ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷರ ನೇಮಕ ಆಗಿದೆ. ರಾಮಮೂರ್ತಿ ಅಧ್ಯಕ್ಷರಾಗಿದ್ದಾರೆ ಅವರು ನಮ್ಮವರೇ ಎರಡು ಬಾರಿ ಕಾರ್ಪೊರೇಟರ್ ಆಗಿದ್ದಾರೆ. ಈಗ ಶಾಸಕರಾಗಿದ್ದಾರೆ ಒಳ್ಳೆಯದಾಗಲಿ ಎಂದು ವಿ ಸೋಮಣ್ಣ ಶುಭ ಹಾರೈಸಿದ್ದಾರೆ. ಹಲ್ಕಾ ಕೆಲಸ ಮಾಡಿದವರು ಆಗಬಾರದು ಅಷ್ಟೇ ರಾಜ್ಯಾಧ್ಯಕ್ಷರು ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.