ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಜಿಕ್ಯೂಷನ್ ಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಾವೇರಿಯಲ್ಲಿ ಸಸಿಎಂ ಇಬ್ರಾಹಿಂ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ರಾಜ್ಯದ ಸ್ವಾಭಿಮಾನಕ್ಕೆ ತಂದಿದೆ ಎಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬೇಟಿ ಬಳಿಕ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದರು. ಸುಪ್ರೀಂ ಕೋರ್ಟ್ ನ ತೀರ್ಪನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ವಿರುದ್ಧವು ಪ್ರಕರಣಗಳು ಇವೆ. ಅವರ ವಿರುದ್ಧ ರಾಜಕೀಯ ಏಕೆ ಅನುಮತಿ ಕೊಟ್ಟಿಲ್ಲ?
ಸಾಮಾನ್ಯ ಮನುಷ್ಯನ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ನಿರ್ಧಾರದ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಟಗರು ಇದ್ದಂತೆ ಧೈರ್ಯ ಹೇಳಿದ್ದೇನೆ. ಮೊದಲು ಸಿಎಂ ಜೊತೆಯಲ್ಲಿ ನಾನು ಇರಲಿಲ್ಲ. ಆದರೆ ಈಗ ಅವರ ಜೊತೆಯಲ್ಲಿ ಇರುತ್ತೇನೆ.
ರಾಜ್ಯಪಾಲರು ಇವರ ಮನೆ ಕ್ಲರ್ಕ್ ಆ? ಅಮಿತ್ ಶಾ ಮನೆ ಮುಂದೆ ಹೋಗಿ ಅಪ್ಪ ಮಗ ಏಕೆ ಕೂತಿದ್ದರು? ಸುಪ್ರೀಂಕೋರ್ಟಿಗೆ ಹೋಗಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ರಾಜ್ಯಪಾಲರು ಟೀಜೆ ಅಬ್ರಹಾಂಗು ಇದೇ ರೀತಿ ಹೇಳಬೇಕಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರದು ನಿತ್ಯ ತೆಗೆದು ಇಡುತ್ತೇನೆ . ನಾನು ಹಳೆ ಭೂಕೈಲಾಸ ನಾಟಕ ಬರೆದವನು ಎಲ್ಲವೂ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬೇಟಿ ಬಳಿಕ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದರು.