ಮಂಡ್ಯ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನಾನು ಕೂಡ ಭತ್ತ ನಾಟಿ ಮಾಡಿದ್ದೇನೆ ಎಂಬ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದು, ನಾನು ನಾಟಿ ಅಷ್ಟೇ ಅಲ್ಲ ನೇಗಿಲು ಹಿಡಿದು ಉಳುಮೆ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದನ್ನು ಗೇಲಿ ಮಾಡಿದ ಚೆಲುವರಾಯಸ್ವಾಮಿ, ಮಂಡ್ಯದವರಿಗೆ ಹುಟ್ಟುತ್ತಲೇ ಭತ್ತ ನಾಟಿ ಮಾಡೋದು ಗೊತ್ತಿದೆ. ಹುಟ್ಟುತಲೇ ಭತ್ತ ಹಾಗೂ ಕಬ್ಬು ನಾಟಿ ಮಾಡೋದು ಗೊತ್ತಿದೆ.ಹೊಸ ಮಾದರಿಯಲ್ಲಿ ನಾಟಿ ಮಾಡೋದು ಕಲಿಸಲು ಬಂದಿದ್ದರೇನೋ.ನಾಟಿ ಕಾರ್ಯಕ್ರಮ ಇವೆಂಟ್ ಮ್ಯಾನೇಜ್ಮೆಂಟ್ ಗೆ ಕೊಟ್ಟಿದ್ರು. ಪುಟ್ಟರಾಜು ಯಜಮಾನರು ಎವೆಂಟ್ ಮ್ಯಾನೇಜ್ಮೆಂಟ್ ಗೆ ಕೊಟ್ಟಿದ್ರುಎಂದು ತಿಳಿಸಿದರು.
ನಾನು ನಾಟಿ ಅಷ್ಟೇ ಅಲ್ಲ ನೇಗಿಲು ಹಿಡಿದು ಉಳುಮೆ ಮಾಡುತ್ತೇನೆ. ನಾನು ಬೇರೆ ಕಡೆಗೆ ಹೋದಾಗ ಟ್ರ್ಯಾಕ್ಟರ್ ಎಲ್ಲಾ ಓಡಿಸುತ್ತೇನೆ. ಅದನ್ನು ನಾನು ರಾಜಕೀಯವಾಗಿ ಬಳಕೆ ಮಾಡುಕೊಳ್ಳುವುದಿಲ್ಲ. ಎಚ್ ಡಿ ಕುಮಾರಸ್ವಾಮಿ ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದಿದ್ದಾರೆ ಕೆಡಿಪಿ ಸಭೆಗೆ ಬರದಿದ್ದರೂ ಪರವಾಗಿಲ್ಲ ಆದರೆ ಯುವಕರಿಗೆ ಕೆಲಸ ಕೊಡಿಸಲಿ ಎಂದು ತಿಳಿಸಿದರು.