ಬೆಂಗಳೂರು: ನಾನು ಯಾವುದೇ ರೀತಿಯ ಅಡ್ಡಮತದಾನವನ್ನು ರಾಜ್ಯಸಭಾ ಚುನಾವಣೆಯಲ್ಲಿ ಮಾಡುವುದಿಲ್ಲ. ನನ್ನ ಮತ ಜೆಡಿಎಸ್ ಅಭ್ಯರ್ಥಿಗೆ ಹೊರತು ಬೇರೆ ಯಾರಿಗೂ ಇಲ್ಲ ಎಂಬುದಾಗಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು ನಾನು ಯಾವುದೇ ರೀತಿಯ ಅಡ್ಡಮತದಾನ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದವರು ನನ್ನನ್ನು ಸಂಪರ್ಕಿಸಿದ್ದಾರೆ ಎಂಬುದು ಎಲ್ಲ ಸುಳ್ಳು ಎಂಬುದಾಗಿ ಹೇಳಿದರು.
ನಾನು ಯಾವತ್ತೂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪರವಾಗಿದ್ದೇನೆ. ನಾನು ಯಾವುದೇ ರೀತಿಯ ಅಡ್ಡಮತದಾನ ಮಾಡುವುದಿಲ್ಲ. ನಾನು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಹಾಕುತ್ತೇನೆ ಎಂಬುದಾಗಿ ತಿಳಿಸಿದರು.
ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜ. ಸಿಎಂ, ಡಿಸಿಎಂ ಭೇಟಿ ಮಾಡಿದ್ದು ಕ್ಷೇತ್ರದ ಅನುದಾನದ ವಿಚಾರವಾಗಿಯೇ ಆಗಿದೆ. ಅದರ ಹೊರತಾಗಿ ಭೇಟಿಯ ವೇಳೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
BREAKING: ರಾಜ್ಯಸಭೆ 4 ಸ್ಥಾನಗಳಿಗೆ ‘ಮತದಾನ’ ಪ್ರಕ್ರಿಯೆ ಆರಂಭ: ಮೊದಲು ಮತ ಚಲಾಯಿಸಿದ ‘ಎಸ್.ಸುರೇಶ್ ಕುಮಾರ್’