ತುಮಕೂರು: ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
BIGG NEWS: ಗೌರಿಬಿದನೂರಿನಲ್ಲಿ ಒಗ್ಗಟ್ಟಿನಿಂದ ಕಮಲ ಅರಳಿಸಲು ಶ್ರಮಿಸಬೇಕು- ಸಚಿವ ಡಾ.ಕೆ. ಸುಧಾಕರ್
ತುಮಕೂರಿನಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಮುರುಘಾಮಠ ಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ ಇದು.
ಅಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗ್ತಿನಿ. ಗದ್ದುಗೆಯಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದಿದ್ದಾರೆ. ಮುರುಘಾ ಮಠಕ್ಕೆ ಎಲ್ಲ ಪಕ್ಷದವರು ಹೋಗಿದ್ದಾರೆ, ಮುಂದೆನೂ ಹೋಗ್ತಾರೆ. ಇತ್ತೀಚೆಗೆ ಯಡಿಯೂರಪ್ಪ, ಅಮಿತ್ ಶಾ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ನಾನೂ ಹೋಗಿದ್ದೆ. ಮಠದಲ್ಲಿ ತಂಗಿದ್ದೆ ಎಂದು ತಿಳಿಸಿದರು.