ನವದೆಹಲಿ : ಯುವಕನೊಬ್ಬನಿಗೆ ತನ್ನ ಕೈ ಮೇಲಿರುವ ಟ್ಯಾಟೂ ತೆಗೆಸಿದ್ರೆ, ಮಾತ್ರ ಕೆಲಸ ನೀಡುವುದಾಗಿ ಅಧಿಕಾರಿಗಳು ಖಡಕ್ ಆಗಿ ತಿಳಿಸಿದ್ದು, ಹೀಗಾಗಿ ಆ ಯುವಕ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಯಾಕಂದ್ರೆ, ಯುವಕನ ಕೈ ಮೇಲಿರುವ ಹಚ್ಚೆ ಧಾರ್ಮಿಕವಾಗಿದ್ದು, ಅದನ್ನ ತೆಗೆಯಲು ಇಚ್ಛಿಸದ ಯುವಕ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಕೇಂದ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರ ಪಡೆಗಳಿಗೆ ಸೇರಲು ಕಾನ್ಸ್ಟೆಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗೆ ಅನರ್ಹ ಎಂದು ಘೋಷಿಸಲಾದ ಯುವಕ ದೆಹಲಿ ಹೈಕೋರ್ಟ್ನಲ್ಲಿ ಅಧಿಕಾರಿಗಳ ನಿರ್ಧಾರವನ್ನ ಪ್ರಶ್ನಿಸಿದರು. ಇದನ್ನ ನ್ಯಾಯಾಲಯಕ್ಕೆ ವಿವರಿಸಿದ ಅಧಿಕಾರಿಗಳ ಪರವಾಗಿ ವಕೀಲರು, ನಮಸ್ಕಾರಕ್ಕೆ ಬಳಸುವ ಬಲಗೈಯಲ್ಲಿ ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿರುವುದು ಕೇಂದ್ರ ಗೃಹ ಸಚಿವಾಲಯದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.
ವೈದ್ಯಕೀಯ ಪರೀಕ್ಷೆ, ಫಿಟ್ನೆಸ್ ಪರೀಕ್ಷೆ ಮತ್ತು ಈ ಕೆಲಸಕ್ಕೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳಲ್ಲಿ ಯುವಕನಿಗೆ ಯಾವುದೇ ನ್ಯೂನತೆಗಳಿಲ್ಲ ಎಂದು ಅಸ್ಸಾಂನ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯವೂ ಅರ್ಜಿದಾರರ ವಾದವನ್ನ ಒಪ್ಪಿಕೊಂಡಿದ್ದು, ಅರ್ಜಿದಾರರು ಹಚ್ಚೆ ತೆಗೆಯಲು ಮತ್ತು ಎರಡು ವಾರಗಳಲ್ಲಿ ಹೊಸ ವೈದ್ಯಕೀಯ ಪರೀಕ್ಷೆಗಾಗಿ ಮಂಡಳಿಯ ಮುಂದೆ ಹಾಜರಾಗಲು ಸ್ವತಂತ್ರರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
BIGG NEWS : 2ನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ‘ಗ್ರೆಗ್ ಬಾರ್ಕ್ಲೇ’ ಪುನರಾಯ್ಕೆ
‘ಕೆಂಪೇಗೌಡ’ ಕಾರ್ಯಕ್ರಮದಿಂದ ಬಿಜೆಪಿ ರಾಜಕೀಯ ಲಾಭ ಪಡೆದಿದೆ : ಎಂ.ಬಿ ಪಾಟೀಲ್ ಕಿಡಿ
ಕತ್ತಲು ಹೆಚ್ಚಾದಾಗ ‘ಕಮಲ’ ಅರಳುತ್ತೆ ; ತೆಲಂಗಾಣದಲ್ಲಿ ‘TRS, KCR’ಗೆ ಪ್ರಧಾನಿ ಮೋದಿ ತರಾಟೆ