ಬಳ್ಳಾರಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಹತಾಶರಾಗಿದ್ದ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಇದೀಗ ಲೋಕಸಭಾ ಟಿಕೆಟ್ ದೊರಕಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೆಪಿ ನಡ್ದ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದು ಇದೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಜನತೆಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ ʻನೇತ್ರ ತಪಾಸಣೆʼ ಸೇವೆ, ʻಆಶಾ ಕಿರಣʼ ಯೋಜನೆಗೆ ಚಾಲನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸೇವೆ ಮಾನದಂಡವಾಗಿಟ್ಟು ನನಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ನನ್ನ ಮೇಲೆ ವಿಶ್ವಾಸ ಇಟ್ಟು ನಮ್ಮ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ನಾನು ಗೆಲ್ಲುವ ಮೂಲಕ ಮೋದಿಗೆ ಉಡುಗೊರೆಯನ್ನು ಕೊಡುತ್ತೇನೆ. ಯಾರು ಏನೆ ಷಡ್ಯಂತರ ಮಾಡಿದರೂ ಕೂಡ ಈ ಬಾರಿ ನಡೆಯುವುದಿಲ್ಲ. ಗೆಲುವು ಮೂಲಕ ಕುತಂತ್ರಿಗಳಿಗೆ ಉತ್ತರ ನೀಡುತ್ತೇನೆ ಎಂದರು.
ವಿಧಾನಸಭೆ ಚುನಾವಣೆ ಸೋಲಿನಿಂದ ಅಜ್ಞಾತ ವಾಸಕ್ಕೆ ಕಳುಹಿಸಲಾಗಿತ್ತು. ಕೊರೊನಾ, ಪೇಸಿಎಂ ಅಪಪ್ರಚಾರ, ಮೋಸದ ಗ್ಯಾರಂಟಿ ಭರವಸೆ ನಮಗೆ ಸೋಲಾಯ್ತು. ಆದರೆ ಈಗ ನಡೆಯುತ್ತಿರೋದು ದೇಶದ ಚುನಾವಣೆ. ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಗೆಲುವಿಗೆ ಎಲ್ಲರೂ ಇರುತ್ತಾರೆ ಸೋಲು ಅನಾಥ. ಹೀಗಾಗಿ ಯಾರನ್ನು ಸೋಲಿಗೆ ಹೊಣೆಗಾರಿಕೆ ಮಾಡಲ್ಲ. ಇಂದಿಗೆ ಆ ಕಾಲ ಮುಗಿದಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುವೆ ಎಂದರು.
ಹೆಗ್ಡೆ ಅಲ್ಲ ಅವರ ‘ಅಪ್ಪ’ ಬಂದ್ರು ‘ಸಂವಿಧಾನ’ ಬದಲಾಯಿಸಲು ಆಗಲ್ಲ : ಮಾಜಿ ಸಚಿವ ರಾಜೂಗೌಡ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಬೇಕು. ಇದು ರಾಮುಲು ಚುನಾವಣೆ ಅಲ್ಲ, ಇಡೀ ದೇಶದ ಚುನಾವಣೆಯಾಗಿದೆ. ಪ್ರಧಾನಿ ಮೋದಿಯವರ ಕಾರ್ಯವೈಖರಿ, ದೇಶದ ಅಭಿವೃದ್ಧಿ ಪತದಡೆಗೆ ಕಂಡೊಯ್ದ ಪರಿ ಜನರು ನೋಡುತ್ತಿದ್ದಾರೆ. ಅಭಿವೃದ್ಧಿಯ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಈ ಬಾರಿ ಅಭೂತಪೂರ್ವವಾಗಿ ಬಿಜೆಪಿ ಗೆಲ್ಲಲಿದೆ ಎಂದರು.