ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ತೆಲಂಗಾಣದ ಜಗ್ತಿಯಾಲ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರ ನಂತರ ಕರ್ನಾಟಕದ ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಅಂತಿಮವಾಗಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
“ನನಗೆ, ಪ್ರತಿ ತಾಯಿ ಶಕ್ತಿಯ ಒಂದು ರೂಪ, ಪ್ರತಿ ಮಗಳು ಶಕ್ತಿಯ ಒಂದು ರೂಪ” ಎಂದು ಪ್ರಧಾನಿ ಮೋದಿ ಹೇಳಿದರು. ಜಗ್ತಿಯಾಲ್ನಲ್ಲಿ ಸಾರ್ವಜನಿಕ ಭಾಷಣ ಮಾಡಿದ ಪ್ರಧಾನಿ ಮೋದಿ, “… ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಮೇ 13ರಂದು ತೆಲಂಗಾಣದ ಮತದಾರರು ಇತಿಹಾಸ ಬರೆಯಲಿದ್ದಾರೆ.”ನಾನು ಅವರನ್ನು ಶಕ್ತಿಯ ರೂಪದಲ್ಲಿ ಪೂಜಿಸುತ್ತೇನೆ ಮತ್ತು ಶಕ್ತಿಯ ಸಾಕಾರರೂಪವಾಗಿರುವ ಈ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸಲು ನಾನು ನನ್ನ ಪ್ರಾಣವನ್ನು ಪಣಕ್ಕಿಡುತ್ತೇನೆ” ಎಂದು ಅವರು ಹೇಳಿದರು.