ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಲವ್ ಜಹಾದ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಠಾಣೆಯ ಮುಂದೆ ಯುವತಿಯ ತಾಯಿ ರಾಜೇಶ್ವರಿ ಹೇಳಿಕೆ ನೀಡಿದ್ದು, ಆರಪಿ ಸಮೀರ್ ಜಿಮ್ ನಲ್ಲಿ ನನ್ನ ಮಗಳಿಗೆ ಏನೇನೋ ಕುಡಿಸಿ ವಿಡಿಯೋ ಮಾಡಿಕೊಂಡು ಬ್ಲಾಕ್ ಅಂಡ್ ಮಾಡುತ್ತಿದ್ದಾನೆ. ಅಲ್ಲದೆ ನಿಮ್ಮ ಮಗಳನ್ನು ಕತ್ತರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ನಮ್ಮ ಮಗಳಿಗೆ ಸಮೀರ್ ಅನ್ಯಾಯ ಮಾಡಿದ್ದಾನೆ ನಾವು ನಮ್ಮ ಮಗಳನ್ನು ಜಿಮ್ಮಿಗೆ ಕಳುಹಿಸುತ್ತಿದೆವು. ಜಿಮ್ ನಲ್ಲಿ ಡ್ರಿಂಕ್ಸ್ ನಲ್ಲಿ ಏನೇನು ಹಾಕಿ ಕುಡಿಸಿದ್ದಾರೆ ನಮ್ಮ ಮಗಳಿಗೆ ಸಮೀರ್ ಬ್ಲಾಕ್ ಮೇಲ್ ಮಾಡಿದ್ದಾನೆ. ನಿಮ್ಮ ಮಗಳನ್ನು ಕತ್ತರಿಸಿ ಸೂಟ್ಕೇಸ್ ನಲ್ಲಿ ಹಾಕಿಸುತ್ತೇನೆ ಮೂರು ಜನರಿಂದ ರೇಪ್ ಮಾಡಿಸುತ್ತೇನೆ ಅಂತ ಹೆದರಿಸಿದ್ದಾನೆ.
ಅಷ್ಟೆ ಅಲ್ಲದೇ ನಮ್ಮ ಮನೆಗೆ ಬಂದು ಸಮೀರ್ ಮನೆಯವರು ಗಲಾಟೆ ಮಾಡಿದ್ದಾರೆ. ನಮ್ಮ ಮಗಳನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಿದ್ದಾರೆ. ಅಲ್ಲದೇ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ತಂಗಿ, ತಂಗಿ ಎಂದು ಮಗಳಿಗೆ ಅನ್ಯಾಯ ಮಾಡಿದ್ದಾರೆ ಗಂಭೀರವಾದ ಆರೋಪ ಮಾಡಿದ್ದಾರೆ.








