ಬೆಂಗಳೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾರಾ ಮಹೇಶ್ ಸ್ಪರ್ಧೆ ವಿಚಾರವಾಗಿ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ನಮ್ಮ ಜೊತೆ ಸಕ್ರಿಯವಾಗಿಲ್ಲ. ಕೆ.ಆರ್ ನಗರ ಕ್ಷೇತ್ರದ ಜನರು ನನ್ನನ್ನು 3 ಬಾರಿ ಆಯ್ಕೆ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ಹೇಳಿಕೆ ನೀಡಿದರು
ಯಾರು ಯಾವಾಗ ಸ್ಪರ್ಧಿಸಬೇಕು ಎಂದು ಎಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ನಿರ್ಧರಿಸುತ್ತಾರೆ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ನನಗೆ ಹೇಳುತ್ತಾರೆ ನಾನು ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎರಡು ಪಕ್ಷದ ನಾಯಕರು ಯಾವ ತೀರ್ಮಾನ ಮಾಡುತ್ತಾರೆ ಎಂದು ನೋಡಬೇಕು. ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರ ಮನವೊಲಿಸುವ ವಿಚಾರವಾಗಿ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸಾರಾ ಮಹೇಶ್ ಹೇಳಿಕೆ ನೀಡಿದ್ದು, 2006ರಲ್ಲಿ ಸಮಸ್ಯೆ ಆಯಿತು. 2013ರಲ್ಲೂ ಬೇಸರ ಮಾಡಿಕೊಂಡರು.
ಆಗ ಕುಮಾರಸ್ವಾಮಿ ನಮ್ಮ ಮನೆ ಬಾಗಿಲು ಮುಚ್ಚಿದೆ ಅಂತ ಅಂದರು. ಮತ್ತೆ ನಾವೆಲ್ಲ ಸೇರಿಕೊಂಡು ವಾಪಸ್ ಕರೆದುಕೊಂಡು ಬಂದ್ವಿ. ಆದರೆ ಈಗ ಜಿಟಿ ದೇವೇಗೌಡ ಅವರನ್ನು ವಾಪಸ್ ಕರೆದರು ನಾವ್ಯಾರು ಸಿದ್ದರಿಲ್ಲ ಸದ್ಯ ಜಿಟಿ ದೇವೇಗೌಡ ಮನವೊಲಿಸುವ ಮನಸ್ಥಿತಿ ಯಾರಿಗೂ ಇಲ್ಲ.ಪಕ್ಷ ಎಲ್ಲಿ ಹೇಳುತ್ತೋ ಆ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಯಾರ ವಿರುದ್ಧವಾದರೂ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.








