ಮೈಸೂರು: ಇಲ್ಲಿ ಬಸ್ ನಿಲ್ದಾಣಗಳು ಗುಂಬಜ್ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಕೂಡಲೇ ಇವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ನಾನೇ ಜೆಸಿಬಿ ತಂದು ಒಡೆದು ಹಾಕುತ್ತೇನೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಮಾತು ಈಗ ವೈರಲ್ ಆಗಿದೆ.
BIGG NEWS : ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಆರಂಭ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ
ಭಾನುವಾರ ಸಂಜೆ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರಿಗೆ ಮಹಾರಾಜರು ಅಡಿಪಾಯ ಹಾಕಿಕೊಟ್ಟಿದ್ದು ಇಲ್ಲಿ ನಾಡಹಬ್ಬ ದಸರಾ, ಚಾಮುಂಡಿ ತಾಯಿ ಭಕ್ತಿಯ ಆಶೀರ್ವಾದದ ಮೇಲೆ ಆಳ್ವಿಕೆ ನಡೆಯಬೇಕು. ಎಲ್ಲ ಸಂಕೇತಗಳು ಕೂಡ ಚಾಮುಂಡಿ ತಾಯಿಯ ಭಕ್ತಿ ಸೂಚಕವಾಗಿರಬೇಕು ಎಂದರು.
BIGG NEWS : ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಆರಂಭ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ
ನಾನು ಸಾಮಾಜಿಕ ಜಾಲತಾಣಗಳನ್ನು ನೋಡಿದೆ. ಅಲ್ಲಿ ಯಾವುದೋ ಬಸ್ ನಿಲ್ದಾಣ ಗುಂಬಜ್ ಆಕಾರದಲ್ಲಿ ರಚನೆಯಿದ್ದು, ನಡುವೆ ದೊಡ್ಡ ಗುಂಬಜ್ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇವೆ. ಈ ರೀತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೂರು ದಿನಗಳಲ್ಲಿ ಅವುಗಳು ತೆರವು ಆಗದಿದ್ದರೆ ನಾನೇ ಜೆಸಿಬಿ ಮೂಲಕ ಅವುಗಳನ್ನು ಒಡೆದು ಹಾಕುತ್ತೇನೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.
BIGG NEWS : ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಆರಂಭ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ