ಬೆಂಗಳೂರು : ‘CWC’ ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, CWC ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ.ಸಿಎಂ ಸಿದ್ದರಾಮಯ್ಯ ಸೇರಿ ಮೂವರು ಸಿಎಂಗಳನ್ನು ಕರೆದಿದ್ದಾರೆ. CWC ಸಭೆಗೆ ಸಿಎಂ ಮಾತ್ರ ಕರೆದಿದ್ದಾರೆ, ಡಿಸಿಎಂ ಕರೆದಿಲ್ಲ. AICC ಅಧ್ಯಕ್ಷ ಜೊತೆ ಬೇರೆ ವಿಚಾರ ಚರ್ಚೆ ಮಾಡಿಲ್ಲ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ನಾನು ಸಿಎಂ ಹೇಳಿದ್ದೇವೆ ಎಂದು ತಿಳಿಸಿದರು.
ನಾನು ಪಕ್ಷದ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ!
ನಾನು ಬಾವುಟ ಕಟ್ಟಿದ್ದೇನೆ. ಕಸ ಗುಡಿಸಿದ್ದೇನೆ. ಪಕ್ಷಕ್ಕೆ ಏನೇನು ಬೇಕು ಎಲ್ಲವನ್ನು ಮಾಡಿದ್ದೇನೆ. ಭಾಷಣ ಮಾಡಿಕೊಂಡು ಹೋಗು ಕೆಲಸ ಮಾಡಿಲ್ಲ ಸ್ಟೇಜ್ ಗೆ ಬಂದ ಮೇಲೆ ಭಾಷಣ ಮಾಡಿಕೊಂಡು ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ಲೈಫ್ ಟೈಮ್ ವರ್ಕರ್. ನಾನು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದೇವೆ ಹೈಕಮಾಂಡ್ ಏನ್ ಹೇಳುತ್ತೆ ಅದರಂತೆ ಹೇಳಿಕೊಂಡು ಹೋಗುತ್ತೇವೆ ಅಂತ ಹೇಳಿದ್ದೇವೆ. ನಾನು ನನಗೆ ಯಾವ ಪೋಸ್ಟ್ ಇದ್ದರು ಪಕ್ಷದ ವರ್ಕರ್. ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದಿನಿ ಪೋಸ್ಟರ್ ಅಂಟಿಸಿದ್ದೇನೆ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.








