ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಕೊನೆಗೂ ಬಿಜೆಪಿ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ನಾಯಕರ ಕರೆ ಮೇರೆಗೆ ಯಡಿಯೂರಪ್ಪನವರ ಕೋಪ ಶಮನವಾಗಿದ್ದು ಇಂದು ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ.
BIGG NEWS: KPTCL ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ; ಪ್ರಮುಖ ಆರೋಪಿ ಬಂಧನ
ಈ ಕುರಿತು ಖುದ್ದು ಬಿ.ಎಸ್ ಯಡಿಯೂರಪ್ಪ ಮಾತನಾಡಿ, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಗೊಂದಲವೂ ಇಲ್ಲ. ಎಲ್ಲ ಒಗ್ಗಟ್ಟಿನಿಂದಲೇ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ನಾನು ಕಾರ್ಯಕ್ರಮಕ್ಕೆ ಹೋಗೋ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಬರಬೇಕೆಂದು ಒತ್ತಾಯ ಬಂದಿದ್ರಿಂದ ಹೋಗುತ್ತಿದ್ದೇನೆ ಎಂದು ಬಿಎಸ್ವೈ ಟ್ವಿಸ್ಟ್ ಮಾತುಗಳನ್ನು ಆಡಿದ್ದಾರೆ. ನಿನ್ನೆ ಬೇರೆ ಕಾರಣಕ್ಕೆ ಹೋಗುವಂತ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಹೋಗಲೇಬೇಕೆಂಬ ಸ್ಥಿತಿ ಬಂದಿದ್ರಿಂದ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
BIGG NEWS: KPTCL ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ; ಪ್ರಮುಖ ಆರೋಪಿ ಬಂಧನ
ಬಿಜೆಪಿಯಲ್ಲಿ ನನ್ನದೇ ಶಕ್ತಿ ಇದೆ. ಪಕ್ಷ ಬಲಪಡಿಸುತ್ತೇನೆ. ರಾಜಕೀಯವಾಗಿ ಯಾರು ಯಾರನ್ನೂ ಮುಗಿಸೋಕೆ ಆಗೋಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋಕ್ಕೆ ಶ್ರಮ ಹಾಕಿದ್ದೇನೆ. ಇದು ರಾಜ್ಯದ ಜನರಿಗೆ ಗೊತ್ತು, ಅದನ್ನೇ ಮುಂದುವರಿಸುತ್ತೇನೆ. ಯಡಿಯೂರಪ್ಪರನ್ನ ಮುಗಿಸ್ತೇವೆ ಅನ್ನೋದರಲ್ಲಿ ಸತ್ಯಾಂಶವಿಲ್ಲ ಎಂದು ಖಡಕ್ ಹೇಳಿದ್ದಾರೆ.