ಮಂಡ್ಯ : ಈಗಾಗಲೇ ಧರ್ಮಸ್ಥಳದ ಕುರಿತು ಎಸ್ಐಟಿ ಅಧಿಕಾರಿಗಳು ಚೆನ್ನಯ್ಯ ಸೇರಿದಂತೆ ಹಲವರನ್ನು ಅತಿವರ ವಿಚಾರಣೆಗೆ ಒಳಪಡಿಸಿದ್ದು ಇದರ ಮಧ್ಯೆ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ರಸ್ಟ್ ಸಿಕ್ಕಿದೆ. ಯೂಟ್ಯೂಬರ್ ಸಮೀರ್ ವಿಚಾರಣೆ ಬಳಿಕ ಇದೀಗ ಮಂಡ್ಯದ ಮತ್ತೊಬ್ಬ ಯುಟುಬರ್, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ನನಗೂ ಸಹ ಹಣದ ಆಮಿಷ ಒಡ್ಡಿದ್ದರು ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾನೆ.
ಹೌದು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರೂ ಎಂದು ಮಂಡ್ಯದ ಯೂಟ್ಯೂಬರ್ ಗಂಭೀರವಾದ ಆರೋಪ ಮಾಡಿದ್ದು, ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಈ ಒಂದು ಹೇಳಿಕೆ ನೀಡಿದ್ದಾನೆ. ನನಗೆ ಅಭಿ ಅನ್ನೋ ಯುಟ್ಯೂಬರ್ ಹಣದ ಆಫರ್ ಕೊಟ್ಟಿದ್ದ. 5 ತಿಂಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ನನಗೆ ಅಭಿ ಸಿಕ್ಕಿದ್ದ. ಸಮೀರ್ ವಿಡಿಯೋ ಹೇಗೆ ವೈರಲ್ ಆಯ್ತು ಅಂತ ಆತನಿಗೆ ಕೇಳಿದ್ದೆ.
ನಾವು ಕೊಡೋ ಕಂಟೆಂಟ್ನ ಯೂಟ್ಯೂಬ್ ನಲ್ಲಿ ಹಾಕಬೇಕು ಜೊತೆಗೆ ವಾಸ್ತವ್ಯಕ್ಕೂ ಸಹ ಜಾಗ ಕೊಡುವುದಾಗಿ ಹೇಳಿದ್ದ. ನಿಮಗೆ ಯಾರು ಗುರು ಫಂಡ್ ಮಾಡೋದು ಎಂದು ಕೇಳಿದೆ ನಮ್ಮ ಬಾಸ್ ಮಹೇಶ್ ತಿಮ್ಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅಂತ ಅಭಿ ಹೇಳಿದ್ದ ಎಲ್ಲಾ ಅವರು ನೋಡಿಕೊಳ್ಳುತ್ತಾರೆ ಎಂದು ನನ್ನನ್ನು ಕರೆದರು ಆದರೆ ಆ ಸಂದರ್ಭದಲ್ಲಿ ನಾನು ಹೋಗಲಿಲ್ಲ ಎಂದು ಸುಮಂತ್ ಹೇಳಿಕೆ ನೀಡಿದ್ದಾನೆ.