ಚಿಕ್ಕಬಳ್ಳಾಪುರ : ನನ್ನ ಕೊನೆಯ ಉಸಿರು ಇರುವಾಗಲೇ ಏನಾದರೂ ಒಳ್ಳೆಯದು ಮಾಡಬೇಕು ಕರ್ನಾಟಕಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ನಾನು ರೈತನ ಮಗ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಿಳಿಸಿದರು.
ನಾನು ಯಾವ ರಾಜಕಾರಣಿ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಯಾವುದೇ ಪಕ್ಷ ಯಾವುದೇ ಜಾತಿಯ ನಾಯಕರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಕೊನೆಯ ಉಸಿರು ಇರುವಾಗಲೇ ಏನಾದರೂ ಒಳ್ಳೆಯದು ಮಾಡಬೇಕು. ಕರ್ನಾಟಕಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ನಾನು ರೈತನ ಮಗ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಕೆಂಪುಕೋಟೆ ಮೇಲೆ ಒಂದು ಬಾರಿ ಬಾವುಟ ಹಾರಿಸಿದ್ದೇನೆ. ನನ್ನ ಶಕ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಆಗಿದ್ದರು.ಆದರೆ ಸ್ವಲ್ಪ ವ್ಯತ್ಯಾಸವಾದ ಕಾರಣ ತಕ್ಷಣ ನಾನೇ ಬಗೆಹರಿಸಿಕೊಂಡೆ ಮಠ, ಒಕ್ಕಲಿಗ ಸಮಾಜವನ್ನು ಸಮರ್ಪಕವಾಗಿ ಮುನ್ನಡೆಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದರು.