ನವದೆಹಲಿ : ಕರ್ನಾಟಕವನ್ನು ರಕ್ಷಿಸಿ ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಗದ್ಗದಿತರಾದ ಪ್ರಸಂಗ ನಡೆಯಿತು. ರಾಜ್ಯದ ನೀರಾವರಿಯ ಬಗ್ಗೆ ರಾಜ್ಯಸಭೆಯಲ್ಲಿ ಎಚ್ ಡಿ ದೇವೇಗೌಡರು ಮಾತನಾಡುವಾಗ ಗದ್ಗದಿತರಾದ ಘಟನೆ ನಡೆದಿದೆ.
ನನ್ನ ರಾಜ್ಯಸಭಾ ಅವಧಿ ಒಂದು ತಿಂಗಳಲ್ಲಿ ಮುಗಿಯುತ್ತೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಹಿತ ಕಾಪಾಡಿರಿ. ಸದನದ ಎಲ್ಲ ಸದಸ್ಯರು ಕರ್ನಾಟಕವನ್ನು ರಕ್ಷಣೆ ಮಾಡಬೇಕು. ಕರ್ನಾಟಕ ರಕ್ಷಣೆ ಮಾಡಿ ಎಂದು ಕೈಮುಗಿದು ಬೇಡುತ್ತೇನೆ. ನಾನು ಜೀವನದ ಕೊನೆ ಕಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಚ್ಡಿ ದೇವೇಗೌಡರ ಮಾತಿಗೆ ಇಡೀ ಸದನ ಒಂದು ಕ್ಷಣ ಮೌನವಾಯಿತು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ದಯಮಾಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ. ರಾಜ್ಯದ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ, ನೆನೆಗುದಿಗೆ ಬಿದ್ದ ಯೋಜನೆಗಳಿಗೆ ಅನುಮೋದನೆ ನೀಡಿ ಎಂದು ಎಚ್ ಡಿ ದೇವೇಗೌಡರು ಕೈ ಮುಗಿದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.








