ಕನಕಪುರ : ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಿಲ್ಲ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಬಸವರಾಜ ರಾಯರೆಡ್ಡಿ, ಡಿವಿ ಸದಾನಂದ ಗೌಡ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನೇನು ಅವರ ವಕ್ತಾರ ಅಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಹೈಕಮಾಂಡ್ ಹೇಳಿದ್ಮೇಲೆನೆ ಸಂಪುಟ ಪುನಾರಚನೆ : ಸಿಎಂ ಸ್ಪಷ್ಟನೆ
ರಾಜ್ಯದಲ್ಲಿ ನಾಯಕತ್ವ ಜಟಾಪಟಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಸಂಪುಟ ಪುನಾರಚನೆ ಯಾವಾಗ ಆಗುತ್ತೆ ಅನ್ನೋದು ಮತ್ತೊಂದು ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಸಿಎಂ ಸಿದರಾಮಯ್ಯ ಯಾರು ಏನೇ ಹೇಳಿದರೂ ಕೂಡ ಕೊನೆಗೆ ಹೈಕಮಾಂಡ್ ಹೇಳಿದ್ಮೇಲೇನೆ ಸಂಪುಟ ಪುನಾರಚನೆ ಆಗಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು ಶಾಸಕರು ದೆಹಲಿಗೆ ಹೋಗಲು ಸ್ವತಂತ್ರರು ದೆಹಲಿಗೆ ತೆರಳಿರುವ ಶಾಸಕರು ಏನು ಹೇಳುತ್ತಾರೋ ಹೇಳಲಿ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಹೈಕಮಾಂಡ್ ಏನು ಹೇಳುತ್ತಾರೋ ಅದನ್ನು ಕೇಳಲು ನಾವು ಸಿದ್ಧರಿದ್ದೇವೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಫುಲ್ ಸ್ಟಾಪ್ ಇಡಬೇಕು ಎಂದು ಸಿಎಂ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.








