ಬೆಂಗಳೂರು : ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಇಂದು ಅಮೆರಿಕಕ್ಕೆ ಹ್ಯಾಟ್ರಿಕ್ ಹೀರೊ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಬೆಂಗಳೂರಿನ ನಾಗವಾರದ ತಮ್ಮ ನಿವಾಸದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ನಿವಾಸದಿಂದ ಕೆಂಪೇಗೌಡ ಏರ್ಪೋರ್ಟ್ ನತ್ತ ನಟ ಶಿವರಾಜ್ ಕುಮಾರ್ ಇದೀಗ ತೆರಳಿದ್ದಾರೆ.
ಈ ವೇಳೆ ಅಮೇರಿಕಾಕೆ ಚಿಕಿತ್ಸೆಗೆ ತೆರಳುವ ಮುನ್ನ ನಟ ಶಿವಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಮಾತನಾಡುವಾಗ ಸ್ವಲ್ಪ ದುಃಖ ಆಯ್ತು ಅಷ್ಟೇ. 35 ದಿನ ಮನೆಯಿಂದ ಆಚೆ ಇರಬೇಕಲ್ವಾ ಅದಕ್ಕೆ ಸ್ವಲ್ಪ ದುಃಖವಾಗುತ್ತಿದೆ. ಜನವರಿ 26 ಕ್ಕೆ ನಾನು ಬೆಂಗಳೂರಿಗೆ ವಾಪಸ್ ಆಗುತ್ತೇನೆ. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯ ಎಂದು ಇದೆ ವೇಳೆ ನಟ ಶಿವರಾಜ್ ಕುಮಾರ್ ಶುಭ ಕೋರಿದರು.
ಪತ್ನಿ ಗೀತಾ ಶಿವರಾಜ್ ಕುಮಾರ್ , ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಲಿದ್ದಾರೆ.ಡಿ.24 ರಂದು ಶಿವಣ್ಣಗೆ ಸರ್ಜರಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ.ಇಂದು ರಾತ್ರಿ 8:30ಗಂಟೆಗೆ ವೇಳೆಗೆ ವಿಮಾನ ಏರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.