ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿಯೂ ತನ್ನ ಮೊದಲ ಹಾಗೂ ಎರಡನೇ ಪಟ್ಟೆ ಬಿಡುಗಡೆ ಮಾಡಿದ್ದು ಆದರೆ ರಾಜ್ಯದ ಇನ್ನೂ ಹಲವು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದ್ದು ಅದರಲ್ಲಿ ಚಿಕ್ಕಬಳ್ಳಾಪುರ ಕೂಡ ಇದೆ. ಹೀಗಾಗಿ ಇದೀಗ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಪ್ರತಿಕ್ರಿಯೆ ಸಿದ್ದು ಕಷ್ಟದ ಸಮಯದಲ್ಲಿ ನಾನು ಬಿಜೆಪಿ ಪಕ್ಷಕ್ಕೆ ನೆರವಾಗಿದ್ದೇನೆ. ಹೀಗಾಗಿ ಪಕ್ಷ ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
BREAKING : ದೇಶದಲ್ಲಿ ‘ಇ-ವಾಹನಗಳ’ ಉತ್ತೇಜನಕ್ಕೆ ‘ಹೊಸ ಇವಿ ನೀತಿ’ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟದ ಸಂದರ್ಭದಲ್ಲಿ ಬಿಜೆಪಿ ಕೈ ಹಿಡಿದಿದ್ದೇನೆ. ನನ್ನ ಜಾಯಮಾನ ಅಥವಾ ಜಾತಕ ದೋಷವು ಗೊತ್ತಿಲ್ಲ ನನಗೆ ರಾಜಕೀಯದಲ್ಲಿ ಯಾವುದು ಸುಲಭವಾಗಿ ಸಿಕ್ಕಿಲ್ಲ. ಚಿಕ್ಕಬಳ್ಳಾಪುರದಲ್ಲಿ ಮಾಡಿ ಸಚಿವ ಡಾ. ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.
ವಿಜಯಪುರ : 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆಗೈಯಾಲಾಗುತ್ತೆ : ನವಜೋಡಿಗಳಿಗೆ ಯುವತಿಯ ತಾಯಿ ಬೆದರಿಕೆ
ನಾನು ಕಳೆದ 5 ವರ್ಷಗಳ ಹಿಂದೆ ಬಂದಿದ್ದೇನೆ ಬಿಜೆಪಿಗೆ ಸರ್ಕಾರ ರಚನೆ ಆಗಲಿಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಸೇವೆ ತ್ಯಾಗ ಇದೆ. ಎಂಟಿಬಿ ನಾಗರಾಜ್, ನಾಗೇಶ್ ಸೇರಿದಂತೆ ಎಲ್ಲರೂ ಬಂದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಹೇಳಿ ಬಹಳ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
‘ಕಾಮಾಲೆ’ ಬಂದಾಗ ‘ಕಣ್ಣು’ಗಳು ಯಾಕೆ ‘ಹಳದಿ ಬಣ್ಣ’ಕ್ಕೆ ತಿರುಗುತ್ವೆ.? ಕಾಮಾಲೆಗೆ ಕಾರಣವೇನು ಗೊತ್ತಾ.?
ನಂಗೆ ಯಾವಾಗಲೂ ಕೂಡ ನನ್ನ ಜಾಯಮಾನ ಸರಿ ಇಲ್ಲವೋ ಅಥವಾ ಜಾತಕದಲ್ಲಿ ದೋಷವಿದೆಯೋ ಗೊತ್ತಿಲ್ಲ.ಬಹಳ ಕಷ್ಟಪಟ್ಟು ಕೊನೆಗಳಿಗೆ ಫಲ ಸಿಕ್ಕಿದ್ದು. ಇವಾಗ್ಲೂ ಕೂಡ ಅದೇ ನಾನು ಆಶಾಭಾವನೆಯಲ್ಲಿದ್ದು ಪಕ್ಷ ನನ್ನನ್ನು ಕೈ ಬಿಡುವುದಿಲ್ಲ ಕಷ್ಟದಲ್ಲಿ ಕೈ ಹಿಡಿದೇ ಇರುವ ಕಾರಣ ಪಕ್ಷ ಕೈ ಬಿಡಲ್ಲ ಎಂದು ಭಾವಿಸಿದ್ದೇನೆ ಇದೇ ವಿಶ್ವಾಸ ಹಾಗೂ ಆಶಾಭಾವನೆಯಿಂದ ಬೇರೆ ಯಾರಿಗೂ ಟಿಕೆಟ್ ಕೊಟ್ಟರು ಅವರ ಪರವಾಗಿ ಕೆಲಸ ಮಾಡುತ್ತೇನೆ.