ವಿಜಯಪುರ: ನಿನ್ನೆ ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಮಾತನಾಡಿದ್ದರು, ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಇಂದು ಶಾಸಕ ಬಸನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.
2023 Election: ನಾವು ಅವಧಿ ಪೂರ್ವ ಚುನಾವಣೆಗೂ ರೆಡಿ, ಅವಧಿ ಸಮಯಕ್ಕೂ ರೆಡಿ – HDK
ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ. ನಾನು ವಾಜಪೇಯಿ, ಅಡ್ವಾಣಿ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಸಿದ್ಧಗಂಗಾಶ್ರೀ, ಸಿದ್ದೇಶ್ವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಆದ್ರೆ ಕೆಲವು ಸ್ವಾಮೀಜಿಗಳ ಕಾಲು ಮುಗಿಯಲ್ಲ. ಮುರುಘಾ ಶರಣರು ಬಂದಿದ್ದಾಗಲೂ ಕಾಲಿಗೆ ನಮಸ್ಕಾರ ಮಾಡಿಲ್ಲ. ಕೆಲ ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ತೊಂದರೆ ಆಗಿದೆ. ಶ್ರೀಗಳನ್ನು ಮನೆಗೆ ಕರೆದು ಲಕ್ಷಗಟ್ಟಲೆ ಹಣ ಕೊಡೋದು ಮಾಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
BIGG NEWS: ಕೊರೊನಾ ಆತಂಕದ ನಡುವೆಯೂ ರಾಜ್ಯಾದ್ಯಂತ ಕ್ರಿಸ್ ಮಸ್ ಸಂಭ್ರಮ; ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ
ಆದರೆ ಈ ದಂಧೆ ಯತ್ನಾಳಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನೇನು ಬಚ್ಚಾ ಅಲ್ಲಾ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನಿರಾಣಿ ಬಚ್ಚಾ ಅದಾನೋ ನನಗೆ ಗೊತ್ತಿಲ್ಲ. ಅದು ಜನರಿಗೆ ಗೊತ್ತಿದೆ. ಮೊನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ನೋಡಿ ಹತಾಶೆ ಆಗಿದ್ದಾರೆ, ಹಾಗಾಗಿ ಅವರು ಹಾಗೆ ಮಾತನಾಡಿದ್ದಾರೆಂದು ವಾಗ್ದಾಳಿ ಮಾಡಿದರು.