ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ ನಾಗೇಂದ್ರ ಅವರು ನಿನ್ನೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬಿಡುಗಡೆಯಾದ ಬಳಿಕ ನೇರವಾಗಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಬಂಧನದ ಕುರಿತು ಹಾಗೂ ಹಗರಣದ ಕುರಿತಂತೆ ಚರ್ಚಿಸಿದ್ದಾರೆ ನಂತರ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.ಬಳಿಕ ಇಂದು ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಅಭಿ ನಾಗೇಂದ್ರ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ ಇದೆಲ್ಲ ಸುಳ್ಳು ಆರೋಪ. ಸಣ್ಣ ದೋಷ ಇಲ್ಲದೆ ಹೊರ ಬರುತ್ತೇನೆ. ಪರಪ್ಪನ ಅಗ್ರಹಾರದ ಜೈಲಿನ ಗೋಡೆಯ ಮೇಲೆ ಬರೆದಿದ್ದೇನೆ. ಬಿಜೆಪಿ ನಾಯಕರ ಹೆಸರು ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲಾಗುತ್ತಾರೆ ನೋಡುತ್ತಾ ಇರಿ ನನ್ನ ವಿರುದ್ಧ ಷಡ್ಯಂತರ ಆಗಿದೆ. ಎಂದು ನಾಗೇಂದ್ರ ಕಣ್ಣೀರು ಹಾಕಿದರು.
ನಾನು ಅಕ್ರಮ ಮಾಡಿದ್ದೇನೆ ಎಂದು ನಂಬಿದ್ದಾರೆ. ನಾನು ಯಾರನ್ನು ನಂಬಿಸಬೇಕಿಲ್ಲ. ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಮುಂದಾಗಿದ್ದಾರೆ. ನಾನು ಹಲವಾರು ಬಾರಿ ಜೈಲು ನೋಡಿದ್ದೇನೆ. ನಿಮ್ಮ ನಾಯಕರು ಇಂಥ ಜೈಲಿಗೆ ಹೆದರಿ ಬೀಳಲ್ಲ ನಾನು. ಒಂದು ಸೋಲಿನಿಂದ ನನ್ನ ಮೇಲೆ ಗೂಬೆ ಕೂರಿಸಿದ್ರಲ್ಲ. ಹಗರಣ ಅಂತ ಬಿಜೆಪಿಯ ಯಾರ್ಯಾರು ಮಾತಾಡುತ್ತಿದ್ದಾರಲ್ಲ. ಅವರ ಹೆಸರು ಜೈಲಿನ ಗೋಡೆಯ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲಾಗುತ್ತಾರೆ ನೋಡ್ತಾ ಇರಿ ಎಂದು ಸಚಿವ ಬಿ ನಾಗೇಂದ್ರ ಕಣ್ಣೀರು ಹಾಕಿದರು.