ಬೆಂಗಳೂರು : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿದರು ಈ ಒಂದು ಸುದ್ದಿಗೋಷ್ಠಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ಸಚಿನ್ ಸಾವಿಗೂ ನನಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಬಹಳ ಬಾಲಿಶವಾಗಿ ಮಕ್ಕಳ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ ನಾಲ್ಕು ಐದು ದಿನಗಳಿಂದ ಬಿಜೆಪಿ ಬಹಳಷ್ಟು ಪ್ರಯತ್ನ ಮಾಡುತ್ತಿದೆ. ನನ್ನ ರಾಜೀನಾಮೆ ಕೊಡಿಸಲು ಖರ್ಗೆಗೆ ಕಪ್ಪು ಚುಕ್ಕೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯವರು ಯಾಕೋ ಹೋಂವರ್ಕ್ ಸರಿಯಾಗಿ ಮಾಡುತ್ತಿಲ್ಲ.ವಿಜಯೇಂದ್ರ ನಾರಾಯಣಸ್ವಾಮಿ ಹೋಂವರ್ಕ್ ಸರಿ ಮಾಡುತ್ತಿಲ್ಲ. ನಾರಾಯಣಸ್ವಾಮಿಗೆ ವೈಯಕ್ತಿಕ ಟೀಕೆ ಮಾಡಲು ಸ್ಥಾನಕೊಟ್ಟಂತಿದೆ.
ಕಲಬುರ್ಗಿ ರಿಪಬ್ಲಿಕ್ ಅಂತ ನಾರಾಯಣಸ್ವಾಮಿ ಆರೋಪ ಮಾಡಿದ್ದರು. ನಿನ್ನೆ ನನ್ನ ಹಳೆಯ ಸ್ವಿಚ್ ಅಪ್ಲೋಡ್ ಮಾಡಿದ್ದಾರೆ. ಬಿಜೆಪಿಯವರು ಕಲ್ಬುರ್ಗಿರಿ ಪಬ್ಲಿಕ್ ಮಾಡಿದವರು ಯಾರು? ನಿಮ್ಮ ಅಭ್ಯರ್ಥಿ ನಮ್ಮ ಕುಟುಂಬದ ವಿರುದ್ಧ ಸಂಚು ಮಾಡುತ್ತಾನೆ. ನಮ್ಮ ತಂದೆ ತಾಯಿ ಕುಟುಂಬ ಕೊಲ್ಲುತ್ತೇನೆ ಅಂತ ಆತ ಹೇಳುತ್ತಾನೆ.ಅದರ ಬಗ್ಗೆ ನಾವು ದೂರು ಕೊಟ್ಟಾಗ ನಿಮಗೆ ಸರ್ಕಾರ ಇತ್ತು. ಅಂಥವನಿಗೆ ನೀವು ಅಧಿಕೃತ ಅಭ್ಯರ್ಥಿ ಮಾಡಿ ಟಿಕೆಟ್ ಕೊಟ್ಟಿದ್ದೀರಿ ಎಂದು ಬಿಜೆಪಿಯ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ ಮಾಡಿದರು.
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಸಾವಿಗೆ ನೇರ ಕಾರಣ ಈಶ್ವರಪ್ಪ ಅಂತ ಡೆತ್ ನೋಟ್ ಬರೆದಿದ್ದರು. ಆದರೆ ಸಚಿನ್ ಪ್ರಕರಣದಲ್ಲಿ ನನ್ನ ಹೆಸರೇ ಬರೆದಿಲ್ಲ. ಸಂತೋಷ್ ಮನೆಗೆ ಒಮ್ಮೆಯಾದರೂ ಬಿ ವೈ ವಿಜಯೇಂದ್ರ ಹೋಗಿದ್ದಾರಾ? ಸಚಿನ್ ಮನೆಗೆ ವಿಜಯೇಂದ್ರ 5 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಯಾಕೆ ಹೋಗಲಿಲ್ಲ? ಯಾರೋ ಬರೆದಿದ್ದನ್ನು ತಿರುಚಿ ಮಗುಚಿ ಹಾಕಿದ್ರಲ್ಲ ನಾಚಿಕೆ ಆಗಲ್ವಾ? ರಾಜೀವ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದೆ ಈವರೆಗೂ ಉತ್ತರ ಬಂದಿಲ್ಲ. ಬಿಜೆಪಿಯವರು ಸುಳಿನ ಮಹಾಶೂರರು ಎಂದು ವಾಗ್ದಾಳಿ ನಡೆಸಿದರು.