ಮಂಡ್ಯ: ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಹುಲಿಯಾರಮ್ಮ ದೇವಸ್ಥಾನ ಲೋಕಾರ್ಪಣೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಯಾರಿಂದಲೂ ಏನು ಅನಿಸಿಕೊಂಡು ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
BIGG NEWS: ಕಾಂಗ್ರೆಸ್ ಸದ್ಯ ಒಡೆದ ಮನೆ; ಅದಕ್ಕೆ ಮೂರು ಬಾಗಿಲುಗಳಿವೆ; ಪ್ರಹ್ಲಾದ್ ಜೋಶಿ ಟೀಕೆ
ನಗರದಲ್ಲಿ ಮಾತನಾಡಿದ ಅವರು, ಜನರು ಅಶೀರ್ವಾದ ಮಾಡಿದ್ದರಿಂದ 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ, ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. 158 ಭರವಸೆಗಳನ್ನೂ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಜಾತಿಗಳಿಗೆ ನಾನು ಅಧಿಕಾರ ಮಾಡಲಿಲ್ಲ. ಅಕ್ಕಿ , ಹಾಲು , ಶೂ ಸಮವಸ್ತ್ರ ಎಲ್ಲಾ ಧರ್ಮದ , ಜಾತಿವರಿಗೂ ಉಪಯೋಗವಾಗಿದೆ ಎಂದರು.
BIGG NEWS: ಕಾಂಗ್ರೆಸ್ ಸದ್ಯ ಒಡೆದ ಮನೆ; ಅದಕ್ಕೆ ಮೂರು ಬಾಗಿಲುಗಳಿವೆ; ಪ್ರಹ್ಲಾದ್ ಜೋಶಿ ಟೀಕೆ
ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ವಿದ್ಯಾರ್ಥಿ ವೇತನ ಕೊಟ್ಟಿಲ್ಲ. ಈ ಬಗ್ಗೆ ಎಸ್ಸಿ-ಎಸ್ಟಿ ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಹೀಗಿರುವಾಗಿ ಎಸ್ಸಿ-ಎಸ್ಟಿ ಸಮುದಾಯಗಳ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.