ಬೆಂಗಳೂರು : ಈದ್ಹಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ವಿಚಾರವಾಗಿ ಕಂದಾಯ ಸಚಿವ ಆರ್ ಆಶೋಕ್ ಮಾತನಾಡಿ “ನಮಗೆ ಮನವಿ ಪತ್ರ ಬಂದಿಲ್ಲ” ಎಂದು ಮಾಧ್ಯಮಗಳಿಗೆ ಸ್ಪಷನೆ ನೀಡಿದ್ದಾರೆ
ಗಣೇಶೋತ್ಸವಕ್ಕೆ ಅನುಮತಿ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಸಂಘ ಸಂಸ್ಥೆಗಳು ಯಾವುದೇ ಮನವಿ ಪತ್ರ ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳಿಗೆ ಬಂದಿದ್ರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಸಿಎಂ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಆರ್ ಆಶೋಕ್ ತಿಳಿಸಿದ್ದಾರೆ