ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬೇಲ್ ಮೇಲೆ ಇದ್ದಾರೆ ಅವರು ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಇದೀಗ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಅಂತ ಹೇಳಿದ್ದೆ, ಈ ಪ್ರಕರಣದಲ್ಲಿ ನನಗೆ ಯಾವುದೇ ಗಂಡಾಂತರ ಬರುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ನಾನ್ಯಾಕೆ ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಇಂದು ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಗಂಗೆನಹಳ್ಳಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವರು ಸಚಿವರು ನನ್ನ ವಿರುದ್ಧ ಹರಿಹಾಯ್ದಿದ್ದರು. ಹಲವಾರು ರೀತಿ ಲಘುವಾಗಿ ಮಾತನಾಡಿರುವುದನ್ನು ಗಮನಿಸಿದ್ದೇನೆ. ನಾನು ಅಧಿಕಾರದಲ್ಲಿದ್ದಾಗ ಯಾವುದೇ ಗಂಡಾಂತರ ಬರುವಂತಹ ಹಾಗೂ ಕಾನೂನುಬಾಹಿರ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
2015ರಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿರುವಾಗ ಆ ಸರ್ಕಾರದ ವಿರುದ್ಧ ಅವತ್ತು ಸಹ ನಾನು ವಿರೋಧ ಪಕ್ಷದ ಶಾಸಕನಾಗಿ ಸರ್ಕಾರದ ಹಲವಾರು ಮುಜುಗರ ಉಂಟುಮಾಡುತಕ್ಕಂತಹ ಹಗರಣಗಳನ್ನು ಪ್ರಸ್ತಾಪಿಸಿದೆ. ಹೀಗಾಗಿ ನನ್ನ ವಿರುದ್ಧ 2015ರಲ್ಲಿ ಕೆಸ್ ಹಾಕಿಸಿದ್ದರು ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ನನ್ನ ಕರೆದಿದ್ದರು ಬಂದಿದ್ದೇನೆ. ಭಂಡತನದಲ್ಲಿ ಆಸ್ತಿ ಲೂಟಿ ಮಾಡಿದ್ದು ನೀವು ನಾನ್ಯಾಕೆ ರಾಜೀನಾಮೆ ಕೊಡಲಿ? ಪಾರದರ್ಶಕ ಆಡಳಿತವಾ ನಿಮ್ಮದು? ಲೋಕಾಯುಕ್ತ ಕಚೇರಿಗೆ ನಾನು ತಪ್ಪು ಮಾಡಿ ಬಂದಿಲ್ಲ ಎಂದು ತಿಳಿಸಿದರು.
ನನ್ನ ಬಗ್ಗೆ ಹೇಳಿಕೆ ನೀಡಿದ ಮಹಾನುಭಾವರು ನನ್ನ ಸಿಎಂ ಮಾಡಿದ್ದರು. ಯಾವ ಮುಖ ಇಟ್ಕೊಂಡು ನನ್ನ ಸಿಎಂ ಮಾಡಿದ್ದರು? ಅವತ್ತು ಯಾಕೆ ನನ್ನ ಮಂತ್ರಿ ಮಂಡಲಕ್ಕೆ ಇವರು ಸೇರಿದ್ದರು? ನಾನು ಯಾರಿಗೂ ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯಹೇಳಿದ್ದಾರೆ. ನನ್ನ ಯೋಜನೆ ಸಹಿಸದೆ ಹೀಗೆ ಮಾಡುತ್ತಿದ್ದಾರೆ ಅಂತಾರೆ. ನಾನೇನು ಮಾಡಿದ್ದೇನೆ ನಾನು ಯಾಕೆ ರಾಜೀನಾಮೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಮುಖ್ಯಮಂತ್ರಿಗಳು ನಾನು ಯಾರಿಗೂ ಹೆದರಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. FIR ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿದ್ದರೂ ಸಹ 48 ಗಂಟೆಗಳಾದರು ಕೂಡ ಸಿಎಂ ವಿರುದ್ಧ FIR ದಾಖಲಿಸಿಲ್ಲ. ನರೇಂದ್ರ ಮೋದಿ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ನಿಮಗೆ? ಹಾಗಾಗಿ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆಬಿ. ಎಸ್ ಯಡಿಯೂರಪ್ಪ ಅವರನ್ನು ಕರೆದಿದ್ದರು. ಇಂದು ನನ್ನನ್ನು ಕರೆದಿದ್ದಾರೆ. ಅವರು ಏನು ಪ್ರಶ್ನೆ ಕೇಳಿದ್ದಾರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಇನ್ನುಳಿದ ತನಿಖೆ ಮುಂದುವರಿಸಲಿ. ಕಾನೂನು ವ್ಯಾಪ್ತಿಯೊಳಗೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳಲಿ.