ಬೆಂಗಳೂರು : ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ವಿಚಾರವಾಗಿ ನನ್ನ ಮೇಲಿನ ಕೇಸ್ ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.ಯಾವ ಕೇಸ್ ವಾಪಸ್ ಪಡೆಯಿರಿ ಅಂತ ನಾನು ಅರ್ಜಿ ಹಾಕಿದ್ದೇನೆ ಹೇಳಿ? ಸರ್ಕಾರದ ಮುಂದೆ ನಾನು ಭಿಕ್ಷೆ ಬೇಡಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಕೋಲಾರ ಚಿಕ್ಕಬಳ್ಳಾಪುರದಲ್ಲಿ ಕೇಸ್ ದಾಖಲಾಗಿರಲಿಲ್ಲ. ನಾನು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರಿಗೆ ಹೊಡೆದಿರಲಿಲ್ಲ. ಪಿಎಫ್ ಐ ಮುಖಂಡರ ಮೇಲಿನ ಕೆಎಸ್ ವಾಪಸ್ ತೆಗೆದುಕೊಂಡರು ಬಳಿಕ ರುದ್ರೇಶ್ ಪ್ರಶಾಂತ್ ಪೂಜಾರಿಯ ಹತ್ಯೆಯಾಯಿತು. ಸರ್ಕಾರ ಈ ಹಂತಕರ ಕೇಸ್ ವಾಪಸ್ ಪಡೆದು ಸುಪಾರಿ ಕೊಟ್ಟಿದೆ. ಇದರ ವಿರುದ್ಧ ನಾವು ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಸಿಟಿ ರವಿ ತಿಳಿಸಿದರು.