ಬಾಗಲಕೋಟೆ: ನಾನು ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗುವುದಿಲ್ಲ. ನನ್ನನ್ನು ಸಚಿವ ಸಂಪುಟ ಸೇರಿಸಿಕೊಂಡಿಲ್ಲ. ಇದರಿಂದಾಗಿ ನನಗೆ ಅಸಮಾಧಾನವಾಗಿದೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING NEWS: ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಬ್ರೇಕ್; ಮೊದಲ ಬಾರಿಗೆ ಮಹಾಮೇಳಾವ್ ಗೆ ಪೊಲೀಸರ ತಡೆ
ನಗರದಲ್ಲಿ ಮಾತನಾಡಿದ ಅವರು, ನಾನು ಬೆಳಗಾವಿಗೆ ಹೋಗುತ್ತಿರುವ ಉದ್ದೇಶ ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸುವುದಕ್ಕೆ ಎಂದು ಹೇಳಿದ್ದಾರೆ.ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ ಶಿಕ್ಷೆಯಾಗಬಾರದು. ನನ್ನ ವಿಚಾರದಲ್ಲಿ ತೀರ್ಪು ಗೊತ್ತಾಗಿದ್ದು, ಕ್ಲೀನ್ ಚಿಟ್ ಬಂದಿದೆ.
BREAKING NEWS: ಬೆಳಗಾವಿಯಲ್ಲಿ MES ಪುಂಡಾಟಕ್ಕೆ ಬ್ರೇಕ್; ಮೊದಲ ಬಾರಿಗೆ ಮಹಾಮೇಳಾವ್ ಗೆ ಪೊಲೀಸರ ತಡೆ
ನಿಮ್ಮನ್ನು ಇವತ್ತು, ನಾಳೆ ಮಂತ್ರಿ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳ್ತಾ ಬಂದಿದ್ದರು. ಆದರೆ ಯಾಕೆ ಇನ್ನೂ ತೆಗೆದುಕೊಂಡಿಲ್ಲವೋ ಗೊತ್ತಾಗುತ್ತಿಲ್ಲ. ಇಡೀ ಕರ್ನಾಟಕ ಜನತೆ ನನಗೆ ಫೋನ್ ಮಾಡಿ ಯಾಕಿನ್ನೂ ನಿಮ್ಮನ್ನ ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂದು ಕೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.