ಕೊಪ್ಪಳ : ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದಾದರೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇನೆ ವಿನಃ ಪಕ್ಷ ವಿಲೀನ ಎಂದಿಗೂ ಮಾಡಿಕೊಳ್ಳುವುದಿಲ್ಲ. ಅಲ್ಲದೆ ಕಾಂಗ್ರೆಸ್ ಗೆ ಸೇರುವ ಮಾತೆ ಇಲ್ಲ ಎಂದು ಗಂಗಾವತಿ ಕ್ಷೇತ್ರದ ಕೆ ಆರ್ ಪಿ ಪಿ ಪಕ್ಷದ ಶಾಸಕರಾದ ಜನಾರ್ದನ್ ರೆಡ್ಡಿ ಸ್ಪಷ್ಟನೆ ನೀಡಿದರು.
BIG NEWS : ಇಂದು ಮಂಡ್ಯದಲ್ಲಿ ‘ಗ್ಯಾರಂಟಿ ಫಾಲಾನುಭವಿಗಳ’ ಬೃಹತ್ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ಕೊಪ್ಪಳದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಈ ವಿಷಯವಾಗಿ ನಾನು ಬಿಜೆಪಿಯ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇನೆ ಆದರೆ ಪಕ್ಷ ವಿಲೀನ ಸಾಧ್ಯವಿಲ್ಲ. ಈ ಕುರಿತು ನನ್ನ ಜೊತೆ ಮಾತನಾಡಿರುವ ಹಿರಿಯರಿಗೆ ನಾನು ಈಗಾಗಲೇ ತಿಳಿಸಿದ್ದೇನೆ ಎಂದರು.
ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ‘ಟ್ರಾಫಿಕ್ ದಂಡ’: 85 ವಾಹನಗಳನ್ನು ಜಪ್ತಿ ಮಾಡಿದ ಬೆಂಗಳೂರು ಪೊಲೀಸರು
ಮುಂದುವರೆದು, ನಾನು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತಮ ಸ್ನೇಹಿತರು. ನಮ್ಮದು ಇಪ್ಪತ್ತು ವರ್ಷದ ಸಂಬಂಧ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ. ಹಾಗಂತಾ ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದರೆ ಅದು ಸುಳ್ಳು. ಕನಸಿನಲ್ಲಿಯೂ ಅದು ಸಾಧ್ಯವಿಲ್ಲ.ಸಿಎಂ ಸಿದ್ದರಾಮಯ್ಯ ಅವರು ಅನುದಾನ ನೀಡಲು ತಾರತಮ್ಯ ಮಾಡುತ್ತಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಈ ಬಾರಿ 100 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದಿದ್ದಾರೆ.
‘ಗ್ಯಾರಂಟಿಯ’ ಉಪಕಾರವನ್ನು ಜನ ಚುನಾವಣೆಯಲ್ಲಿ ತೀರಿಸುತ್ತಾರೆ : ಡಿಸಿಎಂ ಡಿಕೆ ಶಿವಕುಮಾರ