ಕೊಪ್ಪಳ : ಡಿಕೆ ಸಿಎಂ ಆಗಬೇಕು ಅಂತ ಆಪ್ತರು ಹೇಳಿಕೆ ವಿಚಾರವಾಗಿ ನಾನು ಸಿಎಂ ಆಗಬೇಕು ಅಂತ ಕೆಲವರು ಹೇಳುತ್ತಾರೆ ನಾನೇನು ಕಮ್ಮಿ ಇದಿನ ಡಿಕೆ ಎಷ್ಟು ಸಲ ಗೆದ್ದಿದ್ದಾರೆ ನಾನು ಸಹ ಅಷ್ಟೇ ಸಲ ಗೆದ್ದಿದ್ದೇನೆ ನಾನು 1985 ರಿಂದ ಶಾಸಕನಾಗಿದ್ದೇನೆ ಅಭಿಮಾನಕ್ಕಾಗಿ ಕೆಲವರು ಆ ರೀತಿ ಹೇಳಿಕೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗು ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಪ್ರಕ್ಷಣೆಗಳ ಬಗ್ಗೆ ಡಿಕೆ ಶಿವಕುಮಾರ್ ಅಸಮಾಧಾನ ವಿಚಾರವಾಗಿ ಡಿಕೆ ಶಿವಕುಮಾರ್ ಹೇಳಿಕೆಯಲ್ಲಿ ತಪ್ಪಿಲ್ಲ ಆದರೆ ಅದು ಅನಿವಾರ್ಯ ಜಾಸ್ತಿ ಪ್ರಶ್ನೆ ಕೇಳಿದರೆ ಮತ್ತೊಂದು ಸರ್ವೇ ಮಾಡುವುದು ತಪ್ಪುತ್ತದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕೊಕನೂರ ಕನಕಗಿರಿ ಕಾರಟಿಗಿಯಲ್ಲಿ ಶೇಕಡ ನೂರಕ್ಕೆ ನೂರರಷ್ಟು ಸರ್ವೆ ಆಗಿದೆ ಹಾಗಾಗಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಜಾತಿಗಣತಿಯಲ್ಲ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಗಣತಿ ನನಗೆ ಯಾವುದೇ ಜಾತಿ ಧರ್ಮ ಇಲ್ಲ ಎಂದರು.