ಬೆಳಗಾವಿ ಸುವರ್ಣಸೌಧ: ನಾಳೆ ಸಾಗರ ಜಿಲ್ಲೆಗೆ ಒತ್ತಾಯಿಸಿ ಹೋರಾಟಗಾರರು ಸಾಗರ ಬಂದ್ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಕೇಳಿದಂತ ಪ್ರಶ್ನೆಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ನಮ್ಮದೇ ಸರ್ಕಾರ ರಾಜ್ಯದಲ್ಲಿದೆ. ಜಿಲ್ಲೆ ಮಾಡುವುದಾದರೇ ಅದು ಮೊದಲು ಸಾಗರವನ್ನು ಮಾಡಬೇಕು. ಅದಕ್ಕಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ ಎಂದರು.
ನಾಳೆ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಸಾಗರ ಬಂದ್ ನಡೆಸಲಾಗುತ್ತಿದೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರ್ಕಾರದ ಮಟ್ಟದಲ್ಲಿ ಜಿಲ್ಲೆ ಮಾಡುವುದಕ್ಕೆ ಏನು ಬೇಕೋ ಅದರ ಸಹಕಾರವನ್ನು ನಾನು ನೀಡುತ್ತೇನೆ. ನಾಳೆಯ ಸಾಗರ ಬಂದ್ ಯಶಸ್ವಿಯಾಗಲಿ ಎಂಬುದಾಗಿ ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನಾಳೆ ‘ಸಾಗರ ಬಂದ್’ ಹಿನ್ನಲೆ: ‘ಶಾಹಿ ಗಾರ್ಮೆಂಟ್ಸ್’ನಿಂದ ನೌಕರರಿಗೆ ರಜೆ ಘೋಷಣೆ
ಸಾಗರದ ತುಮರಿ-ಬ್ಯಾಕೋಡಲ್ಲಿ ಹೊಸ ಪೊಲೀಸ್ ಠಾಣೆಗೆ ‘ಶಾಸಕ GKB’ ಸದನದಲ್ಲೇ ಪಟ್ಟು: ಈ ಉತ್ತರ ಕೊಟ್ಟ ಗೃಹ ಸಚಿವರು








