Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Nashik TCS Case Twist: ನಿದಾ ಖಾನ್ ತಲಾಶ್‌ಗೆ ಹೋದ ಪಾಲಿಕೆಯಿಂದ ಎಡವಟ್ಟು? ಮುಗ್ಧನ ಹೊಸ ಮನೆ ಧ್ವಂಸ ಮಾಡಿದ ಬುಲ್ಡೋಜರ್!

BIG NEWS : ರಾಜ್ಯಾದ್ಯಂತ ವರುಣಾರ್ಭಟ : ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿ ಐವರಿಗೆ ಗಾಯ!

ಹನುಮಾನ್ ಮಾಲಾ ಮಂತ್ರ ನಿಮ್ಮ ಸಕಲ ಸಂಕಟಗಳನ್ನು ದೂರ ಮಾಡುತ್ತದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ತುಮರಿ-ಬ್ಯಾಕೋಡಲ್ಲಿ ಹೊಸ ಪೊಲೀಸ್ ಠಾಣೆಗೆ ‘ಶಾಸಕ GKB’ ಸದನದಲ್ಲೇ ಪಟ್ಟು: ಈ ಉತ್ತರ ಕೊಟ್ಟ ಗೃಹ ಸಚಿವರು
KARNATAKA

ಸಾಗರದ ತುಮರಿ-ಬ್ಯಾಕೋಡಲ್ಲಿ ಹೊಸ ಪೊಲೀಸ್ ಠಾಣೆಗೆ ‘ಶಾಸಕ GKB’ ಸದನದಲ್ಲೇ ಪಟ್ಟು: ಈ ಉತ್ತರ ಕೊಟ್ಟ ಗೃಹ ಸಚಿವರು

By ವಸಂತ ಬಿ ಈಶ್ವರಗೆರೆ

ಬೆಳಗಾವಿ ಸುವರ್ಣಸೌಧ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತುಮರಿ- ಬ್ಯಾಕೋಡು ಭಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಸದನದಲ್ಲೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪಟ್ಟು ಹಿಡಿದರು. ಇದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪುನರ್ ಪರಿಶೀಲನೆ ನಡೆಸಲಾಗುವುದು ಎಂಬುದಾಗಿ ಉತ್ತರಿಸಿದೆ.

ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಈಗಾಗಲೇ ಶರಾವತಿ ನದಿಗೆ ಸೇತುವೆ ಕಟ್ಟಿರುವ ಹಿನ್ನೆಲೆಯಲ್ಲಿ ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಕೋಡು ಉಪಠಾಣೆ ಕಾರ್ಯ ನಿರ್ವಹಿಸುತ್ತಿದೆ. ಸದರಿ ಉಪ ಠಾಣೆಯಲ್ಲಿ ಮೇಲ್ದರ್ಜೆಗೆ ಏರಿಸಿ ಹೊಸ ಪೊಲೀಸ್ ಠಾಣೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಶರಾವತಿ ನದಿಗೆ ಸೇತುವೆ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ರಾಷ್ಟ್ರೀಯ ಪೊಲೀಸ್ ಆಯೋಗದ ವರದಿ ಮಾರ್ಗ ಸೂಚಿಯ ಅನ್ವಯ ಅಲ್ಲಿ ಪೊಲೀಸ್ ಠಾಣೆ ತೆರೆಯಲು ಆಗದು ಎಂದು ಹೇಳಿದರು.

ಒಂದು ಪೊಲೀಸ್ ಠಾಣೆ ತೆರಬೇಕಾದರೆ 50 ಸಾವಿರ ಜನಸಂಖ್ಯೆ ಮತ್ತು 300 ಅಪರಾಧ ಪ್ರಕರಣಗಳು ಆಗಿರಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ವರದಿ ಸಲ್ಲಿಸಿದ್ದಾರೆ. ಈಗಗಾಲೇ ಶಾಸಕರು ಕೂಡ ತಮ್ಮ ಜತೆಗೆ ಮಾತುಕತೆ ನಡೆಸಿದ್ದಾರೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಿರುವ ಮಾರ್ಗ ಸೂಚಿಯನ್ನು ಸಡಿಲಿಸಬಹುದೇನೂ ಅಂತ ನೋಡಿ ಹೊಸದಾಗಿ ಪೊಲೀಸ್ ಠಾಣೆ ತೆರೆಯುವ ಬಗ್ಗೆ ಪುನರ್ ಪರೀಶಿಸಿಸುವುದಾಗಿ ಹೇಳಿದರು.

ಮುಂಬರುವ ಬಜೆಟ್ ನಲ್ಲಿ ಸಿಗಂದೂರು ಭಾಗದಲ್ಲಿ ಹೊಸ ಪೊಲೀಸ್ ಠಾಣೆ ತೆರೆಯುವ ಪರಿಶೀಲನೆ ನಡೆಸುವುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆಯಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭರವಸೆ ನೀಡಿದರು.

ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸದೇ ಹೋದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಮಧು ಬಂಗಾರಪ್ಪ ಎಚ್ಚರಿಕೆ

ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯಾದ್ಯಂತ ವರುಣಾರ್ಭಟ : ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿ ಐವರಿಗೆ ಗಾಯ!

1 Min Read

ಹನುಮಾನ್ ಮಾಲಾ ಮಂತ್ರ ನಿಮ್ಮ ಸಕಲ ಸಂಕಟಗಳನ್ನು ದೂರ ಮಾಡುತ್ತದೆ!

3 Mins Read

BIG NEWS : ಬೆಂಗಳೂರಲ್ಲಿ ಪೊಲೀಸರೇ ಡೀಲ್ ಕೊಟ್ಟು, ತಂದೆ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

1 Min Read
Recent News

Nashik TCS Case Twist: ನಿದಾ ಖಾನ್ ತಲಾಶ್‌ಗೆ ಹೋದ ಪಾಲಿಕೆಯಿಂದ ಎಡವಟ್ಟು? ಮುಗ್ಧನ ಹೊಸ ಮನೆ ಧ್ವಂಸ ಮಾಡಿದ ಬುಲ್ಡೋಜರ್!

BIG NEWS : ರಾಜ್ಯಾದ್ಯಂತ ವರುಣಾರ್ಭಟ : ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿ ಐವರಿಗೆ ಗಾಯ!

ಹನುಮಾನ್ ಮಾಲಾ ಮಂತ್ರ ನಿಮ್ಮ ಸಕಲ ಸಂಕಟಗಳನ್ನು ದೂರ ಮಾಡುತ್ತದೆ!

BIG NEWS : ಬೆಂಗಳೂರಲ್ಲಿ ಪೊಲೀಸರೇ ಡೀಲ್ ಕೊಟ್ಟು, ತಂದೆ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

State News
KARNATAKA

BIG NEWS : ರಾಜ್ಯಾದ್ಯಂತ ವರುಣಾರ್ಭಟ : ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮಕ್ಕಳು ಸೇರಿ ಐವರಿಗೆ ಗಾಯ!

By ಸುರೇಶ್‌ KARNATAKA 1 Min Read

ಬೀದರ್ : ರಾಜ್ಯಾದ್ಯಂತ ಮುಂಗಾರು ಎಂಟ್ರಿಗು ಮುನ್ನವೇ ವರುಣ ಅಬ್ಬರಿಸುತ್ತಿದ್ದು, ಬೀದರ್ ನಲ್ಲಿ ಮನೆಯ ಮೇಲ್ಚಾವಣಿ ಕುಸಿದು ಐದು ಜನರಿಗೆ…

ಹನುಮಾನ್ ಮಾಲಾ ಮಂತ್ರ ನಿಮ್ಮ ಸಕಲ ಸಂಕಟಗಳನ್ನು ದೂರ ಮಾಡುತ್ತದೆ!

BIG NEWS : ಬೆಂಗಳೂರಲ್ಲಿ ಪೊಲೀಸರೇ ಡೀಲ್ ಕೊಟ್ಟು, ತಂದೆ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

BREAKING : ಬೆಂಗಳೂರಲ್ಲಿ ಚಿನ್ನದ ಡಿಸೈನ್ ಫೋಟೋ ನೆಪದಲ್ಲಿ, 3 ಕೋಟಿ ಮೌಲ್ಯದ, 1.85 ಕೆಜಿ ಚಿನ್ನಾಭರಣ ದರೋಡೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.