ಉತ್ತರಕನ್ನಡ : ಬಿಜೆಪಿಯಿಂದ ಶಾಸಕ ಶಿವರಾಮ್ ಹೆಬ್ಬಾರ್ ಉಚ್ಚಾಟನೆ ವಿಚಾರವಾಗಿ, ನನ್ನ ಸೋಲಿಸಲು ಹುನ್ನಾರ ಮಾಡಿದವರನ್ನು ಬಿಟ್ಟು ನನ್ನನ್ನು ಉಚ್ಚಾಟಿಸಲಾಗಿದೆ. ಪಕ್ಷ ಯಾವುದೇ ನಿರ್ಣಯ ತೆಗೆದುಕೊಂಡರು ನಾನು ಸ್ವಾಗತ ಮಾಡುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶಾಸಕ ಶಿವರಾಂ ಅಬ್ಬಾರ್ ಪ್ರತಿಕ್ರಿಯೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಉಚ್ಚಾಟನೆ ಮಾಡಿರುವ ಆದೇಶದ ಪ್ರತಿ ತಲುಪಿದೆ. ಕೆಲವರು ಅನೇಕ ತಪ್ಪು ಮಾಡಿದ ಬಳಿಕ ಉಚ್ಚಾಟನೆ ಮಾಡಿದರು. ಕೆಲವರು ತಪ್ಪು ಮಾಡಿದರೂ ಕೂಡ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ನಾನು ತಪ್ಪೇ ಮಾಡಿಲ್ಲ ಉಚ್ಚಾಟನೆಯನ್ನು ಯಾಕೆ ನಿರೀಕ್ಷಿಸಲಿ? ನನ್ನ ಸೋಲಿಸಲು ಹುನ್ನಾರ ಮಾಡಿದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನಾನು ಶಾಸಕ ಆಗಬಾರದು ಅಂತ ಇದ್ದರೆ ಬಿಫಾರಂ ಕೊಡಬಾರದಿತ್ತು. ಬಿಫಾರಂ ಕೊಟ್ಟು ಸೋಲಿಸುವ ಕೆಲಸ ಮಾಡಿದ್ದು ಎಷ್ಟು ಸರಿ? ಇದು ಚಿಕ್ಕ ವಿಷಯ ಅಂತ ತಿಳಿದುಕೊಳ್ಳಬೇಡಿ. ನನ್ನನ್ನು ಸೋಲಿಸಲು ಹುನ್ನಾರ ಮಾಡಿದವರನ್ನು ಉಚ್ಚಾಟಿಸುವ ಬದಲು ಇನ್ನಷ್ಟು ಎತ್ತರದ ಸ್ಥಾನ ಕೊಟ್ಟು ಪಕ್ಷದಲ್ಲಿ ಇರುವಂತೆ ಮಾಡಿದರು. ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದು ಇಲ್ಲ ಎಂದು ಶಾಸಕ ಶಿವರಾಂ ಹೆಬ್ಬಾರ್ ಆಕ್ರೋಶ ಹೊರ ಹಾಕಿದರು.