ಬೆಂಗಳೂರು : ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆಯಿಟ್ಟವನು. ಯಾವ ವ್ಯಕ್ತಿ ಪೂಜೆ ಇಲ್ಲ. ನನ್ನದೇನಿದ್ರೂ ಪಕ್ಷ ಪೂಜೆ ನನ್ನದು ಯಾವ ಬಣವೂ ಅಲ್ಲ, ಕಾಂಗ್ರೆಸ್ ಬಣ. ನನ್ನ ಸಂಖ್ಯೆ 140 ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಬೇರಾರು ಅಲ್ಲ, ನಮ್ಮ ಪಾರ್ಟಿಯ ಸೀನಿಯರ್ ಲೀಡರ್. ನಾನೊಬ್ಬನೇ ಪಾರ್ಟಿ ಕಟ್ಟಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಕಟ್ಟಿರೋದು. ಸರ್ಕಾರವನ್ನು ಉಳಿಸಿಕೊಂಡು ಹೋಗಲು ಚರ್ಚೆ ಮಾಡಿದ್ದೇವೆ.
ಬಿಜೆಪಿಯವರು ಏನೇನೋ ಹೇಳ್ತಾರೆ. ಆದರೆ ನಾವು 140 ಮಂದಿ ಒಟ್ಟಾಗಿದ್ದೇವೆ. ಯಾರೂ ಅಲ್ಲಾಡಿಸಲು ಆಗಲ್ಲ. ಸದಾನಂದ ಗೌಡ್ರು ಏನೋ ಹೇಳಿದ್ದಾರೆ. ಪಾಪ ಅವರಿಗೆ ನನ್ನ ಇತಿಹಾಸ ಗೊತ್ತಿಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ ಸಚಿವ ಜಮೀರ್ ಅಹ್ಮದ್, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಎಲ್ಲ ಭೇಟಿ ಮಾಡಿದ್ದರು. ಪಕ್ಷದ ಬಲವರ್ಧನೆಗೆ ಭೇಟಿಯಾಗಿದ್ದೇವೆ ಅಷ್ಟೇ ಎಂದರು.








