ಹುಬ್ಬಳ್ಳಿ : ಹುಬ್ಬಳ್ಳಿಯ ಮಂಟೂರು ರಸ್ತೆಯ ಬಳಿ ಇರುವ ಹಿಂದೂ ಸ್ಮಶಾನ ಭೂಮಿಯ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿರುವ ವಿಚಾರವಾಗಿ ನಿನ್ನೆ ಪ್ರಮೋದ್ ಮುತಾಲಿಕ್ ಪ್ರಸಾದ ಭಯ ವಿರುದ್ಧ ಕಿಡಿ ಕಾರಿದ್ದರು. ಮುತಾಲಿಕ್ ಆರೋಪಕ್ಕೆ ಇದೀಗ ಶಾಸಕ ಪ್ರಸಾದ ಬಯ್ಯ ತಿರುಗೇಟು ನೀಡಿದ್ದು ಬೆಂಕಿ ಹಚ್ಚುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುತಾಲಿಕ್ ತಾಕತ್ತು ನಾನು ನೋಡಿದ್ದೇನೆ. ಬೆಂಕಿ ಹಚ್ಚೋದು ಬಿಟ್ರೆ ಅವನಿಗೆ ಏನೂ ಗೊತ್ತಿಲ್ಲ. ಅವನು ಅಂತಾರಾಷ್ಟ್ರೀಯ ನಾಯಕನೇನು ಅಲ್ಲ.ಪ್ರಮೋದ್ ಮುತಾಲಿಕ್ ನನ್ನನ್ನು ಆರಿಸಿ ತಂದಿಲ್ಲ. ಜನ ನನ್ನನ್ನು ಆರಿಸಿ ತಂದಿದ್ದಾರೆ. ಅವರಿಗಾಗಿ ನಾನು ಕೆಲಸ ಮಾಡುತ್ತಾ ಇದ್ದೇನೆ ಅದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಹರಿಹಾಯ್ದರು.
ಬಿಜೆಪಿಯ ಒಂದು ಗುಂಪು ಇಂದಿರಾ ಕ್ಯಾಂಟೀನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಯಾರದೋ ಭೂಮಿ ಕಬಳಿಸಿ ಇಂದಿರಾ ಕ್ಯಾಂಟೀನ್ ಮಾಡುತ್ತಿಲ್ಲ. ಸ್ಥಳೀಯ ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದೇವೆ. ಸ್ಥಳೀಯರು ಬೇಡವೆಂದರೆ ಅದನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಸಿದ್ಧ ಎಂದರು.
ಮುತಾಲಿಕ್ ಆರೋಪವೇನು?
ಹುಬ್ಬಳ್ಳಿಯಲ್ಲಿ ಸ್ಮಶಾನ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ವಿವಾದ ಹಿನ್ನೆಲೆ ತಾಕತ್ ಇದ್ರೆ ಮುಸ್ಲಿಂ ಖಬರಸ್ತಾನ್‌ದಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡಲಿ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಶಾಸಕ ಅಬ್ಬಯ್ಯ ದರ್ಪ ತೋರಿದ್ದಾರೆ. ಹಿಂದೂ ಸ್ಮಶಾನದ ಕಾಂಪೌಂಡ್ ಒಡೆದು ಎರಡೇ ದಿನದಲ್ಲಿ ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದಾರೆ. ಸ್ಥಳಾಂತರ ಮಾಡಿದರೆ ಸರಿ, ಇಲ್ಲದಿದ್ದರೆ ನಾವೇ ತೆರವು ಮಾಡುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದರು.